Latest

ದೇವಸ್ಥಾನದ ಉತ್ಸವದ ವೇಳೆ ಡಿಜೆ ಹಾಡಿಗೆ ಅರ್ಚಕರ ಭರ್ಜರಿ ಬ್ರೇಕ್ ಡ್ಯಾನ್ಸ್!! ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ

665

ನ್ಯೂಸ್‌ ನಾಟೌಟ್:ದೇವರ ಪೂಜೆ ಮಾಡುತ್ತಿದ್ದ ಅರ್ಚಕರೊಬ್ಬರು ಡಜೆ ಹಾಡಿಗೆ ಬ್ರೇಕ್ ಡ್ಯಾನ್ಸ್‌ ಮಾಡುವುದರ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ದೇವಸ್ಥಾನವೊಂದರಲ್ಲಿ ನಡೆದ ಬ್ರಹ್ಮೋತ್ಸವದ ವೇಳೆ ಅರ್ಚಕರು ಬ್ರೇಕ್-ಡ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಮಂದಸಾ ಗ್ರಾಮದ ಶ್ರೀ ವಾಸುದೇವ ಪೆರುಮಾಳ್ ದೇವಸ್ಥಾನದಲ್ಲಿ ಫೆಬ್ರವರಿ 17 ರಿಂದ 23 ರವರೆಗೆ ನಡೆದ 16 ನೇ ವಾರ್ಷಿಕ ಬ್ರಹ್ಮೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಪ್ರತಿ ವರ್ಷದಂತೆ ಈ ದೇವಾಲಯದಲ್ಲಿ ಬ್ರಹ್ಮೋತ್ಸವ ನಡೆಯುತ್ತಿದೆ. ಈ ವೇಳೆ ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ತೋತ್ರಗಳು ಮತ್ತು ಭಕ್ತಿಗೀತೆಗಳೊಂದಿಗೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಆದರೆ ಈ ವರ್ಷದ ರಥೋತ್ಸವದ ಮೆರವಣಿಗೆ ವೇಳೆ ಭಕ್ತಿಗೀತೆಗಳ ಜೊತೆಗೆ ಡಿಜೆ ಹಾಡುಗಳನ್ನು ಬಳಸಲಾಗಿದೆ ಎನ್ನಲಾಗಿದೆ . ಈ ಸಂದರ್ಭ ಇಲ್ಲಿನ ಅರ್ಚಕರೊಬ್ಬರು ಡಿಜೆ ಹಾಡಿಗೆ ಬ್ರೇಕ್ ಡಾನ್ಸ್ ಮಾಡಿ ಅಲ್ಲಿದ್ದ ಜನರನ್ನೇ ಬೆರಗಾಗಿಸಿದ್ದಾರೆ, ಇದೀಗ ವೈರಲ್ ವಿಡಿಯೋ ಸಂಪ್ರದಾಯ ಮತ್ತು ಆಧುನಿಕತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.ಕೆಲವರು ಇರ್ಲಿ ಬಿಡಿ ಅವರಿಗೂ ಮನರಂಜನೆ ಬೇಕಲ್ವ ಅಂತ ಹೇಳಿದ್ರೆ ಮತ್ತೂ ಕೆಲವರು ಅರ್ಚಕರಿಗೆ ಅವರದ್ದೇ ಆದ ಗೌರವವಿದೆ ಅದನ್ನು ಅವರು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

 

See also  ಬಿಸಿ ರೋಡ್: ತಲೆ ಸುತ್ತುತ್ತಿದೆ ಎಂದ ಯುವಕ ಹೃದಯಾಘಾತಕ್ಕೆ ಬಲಿ, ಆಗಿದ್ದೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget