ಕರಾವಳಿ

ಹಸೆಮಣೆ ಏರಲು ರೆಡಿಯಾದ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ?ತುಳುನಾಡಿನ ಕುವರಿಯನ್ನು ಮದುವೆಯಾಗುತ್ತಿರುವ ಹುಡುಗ ಯಾರು?

ನ್ಯೂಸ್‌ ನಾಟೌಟ್‌: ಕಳೆದ ನಾಲ್ಕೈದು ವರ್ಷಗಳಿಂದ ಆ್ಯಂಕರ್ ಅನುಶ್ರೀಯವರು ಎದುರಿಸುತ್ತಿದ್ದ ಒಂದೇ ಒಂದು ಪ್ರಶ್ನೆ ಎಂದರೆ ‘ಮೇಡಮ್ ನಿಮ್ಮ ಮದುವೆ ಯಾವಾಗ?’ ಎಂದು.ಇದಕ್ಕೆ ಉತ್ತರ ಕೊಟ್ಟು ಕೊಟ್ಟು ಅನುಶ್ರೀಯವರೇ ಸುಸ್ತಾಗಿ ಹೋಗಿದ್ದಾರೆ.ಕಡೆಗೂ ಅವರ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಡುತ್ತಿದ್ದು, ಮಾರ್ಚ್‌ ನಲ್ಲಿ ಮದುವೆ ಎಂದು ಹೇಳ್ಕೊಂಡಿದ್ದಾರೆ.

ಅಂದ ಹಾಗೆ ಹಸೆಮಣೆ ಏರಲು ರೆಡಿಯಾದ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತಾ?ಪಟ ಪಟ ಅಂತಾ ಅರಳು ಹುರಿದಂತೆ ಕನ್ನಡದಲ್ಲಿ ಮಾತನಾಡುತ್ತ ಎಲ್ಲರ ಮನಸೆಳೆಯುವ ಹಾಗೆ ನಿರೂಪಣೆ ಮಾಡುವ ಕೌಶಲ್ಯ ಆಂಕರ್ ಅನುಶ್ರೀ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮದುವೆ ಯಾವಾಗ ಅನ್ನುವ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು.

ಅನುಶ್ರೀ ಕನ್ನಡದಲ್ಲಿ ಹತ್ತಾರು ವರ್ಷಗಳಿಂದಲೂ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದು ಜೀವನ ಕಟ್ಟಿಕೊಟ್ಟವರು. ಬಡತನ ಹಸಿವು ನೋಡುತ್ತ ಬೆಳೆದ ಅನುಶ್ರೀ ಈಗ ಉತ್ತಮ ನಿರೂಪಕಿಯಾಗಿ ಹತ್ತಾರು ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗಿದ್ದಾರೆ.

ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ, ಇದೀಗ ಐಷಾರಾಮಿ ಮನೆ ಮತ್ತು ಕಾರನ್ನು ಅನುಶ್ರೀ ಹೊಂದಿದ್ದಾರೆ ಎನ್ನಲಾಗುತ್ತದೆ.  ಅನುಶ್ರೀ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಇದೆ ಎಂದೂ ಹೇಳಲಾಗುತ್ತಿದೆ. ಸ್ಯಾಂಡಲ್‌ವುಡ್‌ ಸ್ಟಾರ್ ನಿರೂಪಕಿ ಅನುಶ್ರೀ ಒಟ್ಟು ಆಸ್ತಿ ಸುಮಾರು 50 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.ಆದರೆ ಅವರು ಮಾತ್ರ ಎಲ್ಲೂ ಅಧಿಕೃತವಾಗಿ ತಮ್ಮ ಆಸ್ತಿಯ ಬಗ್ಗೆ ಹೇಳಿಕೊಂಡಿಲ್ಲ.

Related posts

ಸುಳ್ಯ: ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ವಾರ್ಷಿಕ ಕ್ರೀಡಾಕೂಟ,ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅವಶ್ಯಕ: ಎನ್.ಎ.ರಾಮಚಂದ್ರ

ಬಿಜೆಪಿಯಿಂದ ಆಯ್ತು ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸೋದು ಯಾರು..? ಪದ್ಮರಾಜ್ ಆಯ್ಕೆ ಬಹುತೇಕ ಖಚಿತ

ಕಡೆಪಾಲದಲ್ಲಿ ಮಗುಚಿಬಿದ್ದ ಕಂಟೇನಾರ್ ಲಾರಿ