ವೈರಲ್ ನ್ಯೂಸ್

ರಾಜ್ಯವೇ ಖುಷಿ ಪಡುವ ನ್ಯೂಸ್ ಕೊಟ್ಟವಳು ಈಗ ನಾಪತ್ತೆ, 100 ಜನರಿಗೆ ದಿವ್ಯಾ ವಸಂತಾ ಗ್ಯಾಂಗ್ ನಿಂದ ಪಂಗನಾಮ..!

ನ್ಯೂಸ್ ನಾಟೌಟ್: ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಚಾನೆಲ್ ನಲ್ಲಿ ಗಂಟಲು ಹರಿಯುವಂತೆ ಬೊಬ್ಬೆ ಹೊಡೆಯುತ್ತಿದ್ದ ಟೀವಿ ನಿರೂಪಕಿ ಈಗ ಜೈಲು ಸೇರುವ ಪ್ರಸಂಗ ಬಂದೊದಗಿದೆ. ಜೈಲು ಸೇರುವುದು ಖಚಿತ ಎನ್ನುವುದು ಗೊತ್ತಾಗುಲೇ ಆಕೆ ಪರಾರಿಯಾಗಿದ್ದಾಳೆ. 100 ಜನರಿಗೆ ದಿವ್ಯಾ ವಸಂತ್ ಅಂಡ್ ಗ್ಯಾಂಗ್ ಸುಲಿಗೆ ಮಾಡಿದೆ ಅನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ರಾಜ್ ನ್ಯೂಸ್ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಒಇ) ಸೇರಿ ಇಬ್ಬರನ್ನು ಜೆ.ಬಿ ನಗರದ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧನಕ್ಕೊಳಗಾದವರು ರಾಜ್ ನ್ಯೂಸ್ ಕಾರ್ಯನಿರ್ವಾಹಕ ಅಧಿಕಾರಿ ರಾಜಾನುಕುಂಟೆ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತ್ ಸಹೋದರ ಸಂದೇಶ್ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ನಿರೂಪಕಿ ದಿವ್ಯಾ, ಸಚಿನ್ ಹಾಗೂ ಆಕಾಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವೆಂಕಟೇಶ್ ಹಾಗೂ ದಿವ್ಯಾ ತಂಡ ಕೆಲ ದಿನಗಳ ಹಿಂದೆ ಇಂದಿರಾನಗರದ ಟ್ರೀ ಸ್ಪಾ ಅಂಡ್ ಬ್ಯೂಟಿ ಪಾರ್ಲರ್ ಗೆ ಈಶಾನ್ಯ ರಾಜ್ಯದ ಯುವತಿಯನ್ನು ಸೇರಿಸಿತ್ತು. ಬಳಿಕ ಗ್ರಾಹಕನ ಸೋಗಿನಲ್ಲಿ ಇವರ ತಂಡ ಹೋಗಿ ಅಲ್ಲಿ ಆ ಯುವತಿಯೊಂದಿಗೆ ಸಲುಗೆಯಲ್ಲಿರುವಂತೆ ವಿಡಿಯೋ ಚಿತ್ರೀಕರಣ ಮಾಡಿ ಸಂಸ್ಥೆಯ ಮಾಲೀಕನಿಗೆ ೧೫ ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿತ್ತು. ಈ ಕಿರುಕುಳ ತಾಳಲಾರದೆ ಸಂಸ್ಥೆ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.

ಇವರು ಹನಿಟ್ರ್ಯಾಪ್ ಮಾಡಿಸಿ ವೈದ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಹಣ ಸಲಿಗೆ ಮಾಡಿದ್ದರೆಂದು ತಿಳಿದು ಬಂದಿದೆ. ಸದ್ಯ ದಿವ್ಯಾ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ತಾಯಿ ಪೊಲೀಸರೆದುರು ಕಣ್ಣೀರಿಟ್ಟಿದ್ದಾರೆ.

Related posts

ಡೇಟಿಂಗ್ ಆ್ಯಪ್ ಮೂಲಕ ತಾನು ವಿದೇಶಿ ಮಾಡೆಲ್ ಎಂದು ಹೇಳಿ ಬರೊಬ್ಬರಿ 700 ಯುವತಿಯರಿಗೆ ವಂಚನೆ..! ಸಾಮಾಜಿಕ ಜಾಲತಾಣದಲ್ಲಿ ಬ್ರೆಜಿಲ್ ಮೂಲದ ಮಾಡೆಲ್ ಓರ್ವನ ಫೋಟೋ ಬಳಕೆ..!

ಶಿಕ್ಷಕಿಯರಿಗೆ ಇನ್ನು ಮುಂದೆ ವಸ್ತ್ರಸಂಹಿತೆ ಕಡ್ಡಾಯ..! ಈ ಬಗ್ಗೆ ಉನ್ನತ ಅಧಿಕಾರಿ ಹೇಳಿದ್ದೇನು..?

ಅನಂತ್ ಅಂಬಾನಿ ಮದುವೆಗೆ ಬಾಂಬ್ ಬೆದರಿಕೆ..! ಇಂಜಿನಿಯರ್ ಅರೆಸ್ಟ್..!