ಕರಾವಳಿ

ಶ್ವಾನಕ್ಕಂತ ಇರಿಸಿದ ಚಿಕನ್‌ನನ್ನು ತಿಂದ ಆ್ಯಂಕರ್ ಅನುಶ್ರೀ..! ಬಳಿಕ ಗೊತ್ತಾಗಿದ್ದು ಹೇಗೆ?

ನ್ಯೂಸ್‌ ನಾಟೌಟ್ :ಹಿರಿಯರಿಂದ ಹಿಡಿದು ಕಿರಿಯರವರೆಗೂ ಅನುಶ್ರೀ ಯಾರೆಂದು ಕೇಳಿದರೆ ಎಲ್ಲರಿಗೂ ಗೊತ್ತು.ಇವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.ಅನು ಮಾತೆತ್ತಿದರೆ ಸಾಕು.. ಜನ ಫುಲ್ ಫಿದಾ .ಆದರೆ ಇಷ್ಟೆಲ್ಲಾ ಪ್ರಸಿದ್ಧಿ ಪಡೆದಿರುವ ಅನುಶ್ರೀ ಒಂದೊಮ್ಮೆ ನಾಯಿಗೆ ಹಾಕೋ ಚಿಕನ್ ತಿಂದಿದ್ದರಂತೆ..! ಸ್ವತಃ ಅವರೇ ಸಂದರ್ಶನವೊಂದರಲ್ಲಿ ಇದನ್ನು ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಾರೆಯರ ಸಂದರ್ಶನವನ್ನೆಲ್ಲಾ ಮಾಡುತ್ತಿರುತ್ತಾರೆ. ಇದೇ ರೀತಿ ಕಳೆದ ವರ್ಷ ಅಂದರೆ 2023ರ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಸ್ಪೆಷಲ್ ಗೆಸ್ಟ್ ಆಗಿ ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಅವರನ್ನು ಕಾರ್ಯಕ್ರಮಕ್ಕೆ ಅನುಶ್ರೀ ಆಹ್ವಾನಿಸಿದ್ದರು. ಇದೇ ಸಂದರ್ಶನದಲ್ಲಿ ಕೆಲ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ.

ಇಬ್ಬರೂ ಮಂಗಳೂರಿನವರೇ ಆದ್ದರಿಂದ ಅನುಶ್ರೀ ಹಾಗೂ ಶುಭಾ ಪೂಂಜಾ ಬಾಲ್ಯದಿಂದಲೇ ಪರಿಚಿತರು. ಮೊದಲಿನಿಂದಲೇ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುತ್ತಿದ್ದರು. ಅದೇ ರೀತಿ ಒಂದು ದಿನ ಶುಭಾ ಮನೆಗೆ ಅನುಶ್ರೀ ಭೇಟಿ ಕೊಟ್ಟಾಗ ತೀರಾ ಹಸಿದಿದ್ದರಂತೆ. ತಿನ್ನಲು ಏನಿದೆ ಎಂದು ಶುಭಾ ಬಳಿ ಕೇಳಿದಾಗ ಚಿಕನ್ ಮಾಡಿದ್ದೇನೆ, ಡೈನಿಂಗ್ ಟೇಬಲ್ ಮೇಲೆ ಇದೆ ತಿನ್ನು ಎಂದು ಹೇಳುತ್ತಾ ಶುಭಾ ಬೇರೆ ಕೆಲಸ ಮಾಡಲು ತೆರಳಿದ್ದಾರೆ.

ಶುಭಾ ಹೇಳಿದ್ದೇ ತಡ, ಅನುಶ್ರೀ ಡೈನಿಂಗ್ ಮೇಲಿದ್ದ ಚಿಕನ್ ಸಾಂಬಾರ್ ಅನ್ನು ತೆಗೆದುಕೊಂಡು ಅನ್ನದ ಜೊತೆ ಸೇವಿಸಿದ್ದಾರೆ. ಇದಕ್ಕೇನು ಉಪ್ಪು ಇಲ್ಲ, ಖಾರನೂ ಇಲ್ಲ ಎನ್ನುತ್ತಾ ಮನಸ್ಸಲ್ಲೇ ಅಂದುಕೊಂಡು ಅನುಶ್ರೀ ತಿನ್ನಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಶುಭಾ ಬಂದಾಗ, “ಏನಿದು ನಿಮ್ಮ ಮನೆಯ ಚಿಕನ್ ಸಾರಿನಲ್ಲಿ ಉಪ್ಪು-ಖಾರ ಸ್ವಲ್ಪನೂ ಇಲ್ಲ” ಎಂದು ಅನುಶ್ರೀ ಹೇಳಿದ್ದಾರೆ. ತಕ್ಷಣ ಡೈನಿಂಗ್ ಮೇಲಿರುವ ಪಾತ್ರೆಯ ಮುಚ್ಚಳ ತೆಗೆದು ನೋಡಿದ ಶುಭಾ, “ಇದು ನಾಯಿಗೆ ಹಾಕಲು ಮಾಡಿಟ್ಟ ಚಿಕನ್” ಎಂದು ಹೇಳಿದ್ದಾರೆ.ಬಳಿಕ ನಾಯಿಗೆ ಹಾಕೋ ಚಿಕನ್‌ನ್ನು ಯಾರದ್ರೂ ಟೇಬಲ್ ಮೇಲೆ ಇಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

Related posts

ಉಪ್ಪಿನಂಗಡಿ: ಬಜರಂಗದಳ ಮುಖಂಡರಿಂದ ಹಲ್ಲೆ..! ಅಂಗಡಿಯಿಂದ ಹೊರಗೆಳೆದು ನಡುರಸ್ತೆಯಲ್ಲಿ ವ್ಯಕ್ತಿಯ ಹಲ್ಲೆಗೆ ಕಾರಣವೇನು? ಇಲ್ಲಿದೆ ಸಿಸಿಟಿವಿ ದೃಶ್ಯ

ನದಿಗೆ ಬಿದ್ದ ಆಟೋ ರಿಕ್ಷಾ, ಚಾಲಕ ಪ್ರಾಣಪಾಯದಿಂದ ಪಾರು

ಉಡುಪಿಯ ಖಾಸಗಿ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ..!ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು‌!