ಕರಾವಳಿ

ಮಂಗಳೂರು:ವೃದ್ದ ಮಾವನಿಗೆ ವಾಕ್ ಸ್ಟಿಕ್‌ನಿಂದ ಹಿಗ್ಗಾಮುಗ್ಗಾ ಬಾರಿಸಿದ ಸೊಸೆ; ಕೈಮುಗಿದು ಎಷ್ಟೇ ಬೇಡಿದ್ರು ಕೆಇಬಿ ಅಧಿಕಾರಿಯ ಮನಸ್ಸೇ ಕರಗಲಿಲ್ಲ..!ಏನಿದು ಹೃದಯವಿದ್ರಾವಕ ಘಟನೆ?

204

ನ್ಯೂಸ್‌ ನಾಟೌಟ್‌ : ಹಿರಿಯರಿಗೆ ಗೌರವ ಕೊಟ್ಟು ಮಾತನಾಡುವ ದೇಶ ನಮ್ಮದು.ಹೀಗೆ ಸಂಸ್ಕೃತಿ,ಸಂಸ್ಕಾರರದಲ್ಲೂ ಶ್ರೀಮಂತಿಕೆಯಿಂದ ಕೂಡಿದ ನಮ್ಮ ದೇಶದಲ್ಲಿ ವೃದ್ದರನ್ನು, ಮಕ್ಕಳನ್ನು ಕಂಡಾಗ ಅವರು ದೇವರಿಗೆ ಸಮಾನ ಎಂದೇ ಕರೆಯುತ್ತೇವೆ.ಆದರೆ ಇಲ್ಲೊಬ್ಬಳು ಅಧಿಕಾರಿ ಮಹಿಳೆಯೊಬ್ಬಳು ವೃದ್ದ ಮಾವನಿಗೆ ವಾಕ್ ಸ್ಟಿಕ್‌ನಿಂದ ಹಿಗ್ಗಾಮುಗ್ಗಾ ಬಾರಿಸಿರೋದನ್ನು ಕಂಡ್ರೆ ಎಂಥವರಿಗೂ ಒಂದು ಕ್ಷಣ ಶಾಕ್ ಆಗುತ್ತೆ.ಮಾತ್ರವಲ್ಲ ವೃದ್ದ ವ್ಯಕ್ತಿಯನ್ನು ಕಂಡಾಗ ಕನಿಕರವಾಗುತ್ತೆ.

ಹೇಳ್ಕೊಳ್ಳೋಕೆ ಆಕೆ ಸರ್ಕಾರಿ ಅಧಿಕಾರಿ. ವೃದ್ಧ ಮಾವನಿಗೆ ಬಾರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಅದ್ರಲ್ಲೂ ಈ ಘಟನೆ ನಡೆದಿರೋದು ಬುದ್ದಿವಂತರೆನಿಸಿಕೊಂಡ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನ್ನೋದು ವಿಪರ್ಯಾಸ. ಮಂಗಳೂರಿನ ಕುಲಶೇಖರದಲ್ಲಿ ಈ ಘಟನೆ ನಡೆದಿದ್ದು,87 ವರ್ಷದ ಪದ್ಮನಾಭ ಸುವರ್ಣ ಅವರು ಸೊಸೆಯಿಂದ ಹೊಡೆಸಿಕೊಂಡ ಮಾವ. ಆರೋಪಿ ಸೊಸೆಯನ್ನು ಉಮಾಶಂಕರಿ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಮಾರ್ಚ್ 9 ರಂದು ಮಾವನಿಗೆ ವಾಕ್ ಸ್ಟಿಕ್ ನಲ್ಲಿ ಸೊಸೆ ಈ ಕೃತ್ಯವೆಸಗಿದ್ದಾಳೆ. ಮಾವ ಕೈಮುಗಿದು ಬೇಡಿಕೊಂಡರೂ ಬಿಡಲಿಲ್ಲ. ಈ ಪರಿಣಾಮ ವೃದ್ಧನ ಕೈ, ಮುಖಕ್ಕೆ ಗಾಯಗಳಾಗಿವೆ. ಉಮಾಶಂಕರಿ ಪತಿ ವಿದೇಶದಲ್ಲಿ ಉದ್ಯೋಗಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಯಾವ ಕಾರಣಕ್ಕೆ ಸೊಸೆ ಮಾವನಿಗೆ ಹೊಡೆದಿದ್ದಾಳೆ ಅನ್ನೋ ವಿಚಾರ ತಿಳಿದುಬಂದಿಲ್ಲ. ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ತಂದೆಗೆ ಬಾರಿಸಿರುವ ಉಮಾ ಶಂಕರಿ ವಿರುದ್ಧ ಸಿಸಿಟಿವಿ ದೃಶ್ಯ ಆಧರಿಸಿ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

See also  ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ಪೊಲೀಸರ ಮೇಲೂ ಬಿದ್ದ ಕಲ್ಲು..! ನಾಗಮಂಗಲದ ಬಳಿಕ ಮತ್ತೊಂದು ಹಿಂಸಾಚಾರ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget