Latestಕರಾವಳಿಕಾಸರಗೋಡು

ಪರೀಕ್ಷೆಗೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿಯ ಹಾಲ್‌ ಟಿಕೆಟ್ ಕಸಿದು ಹಾರಿ ಹೋದ ಹದ್ದು..!

966

ನ್ಯೂಸ್‌ ನಾಟೌಟ್: ಪರೀಕ್ಷೆಗೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿಯೋರ್ವನ ಹಾಲ್‌ ಟಿಕೆಟನ್ನು ಹದ್ದೊಂದು ಹಿಡಿದು ಹಾರಿಹೋದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಈ ವಿಚಿತ್ರ ಘಟನೆಗೆ ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಸಾಕ್ಷಿಯಾಗಿದೆ. ಈ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇಲಾಖಾ ಪರೀಕ್ಷೆ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಹದ್ದು ಹಾರಿ ಬಂದ ಹದ್ದೊಂದು ವಿದ್ಯಾರ್ಥಿಯ ಹಾಲ್ ಟಿಕೆಟ್ ಅನ್ನು ಕಸಿದುಕೊಂಡಿದೆ. ಬೆಳಿಗ್ಗೆ 7.30 ಕ್ಕೆ ನಿಗದಿಯಾಗಿದ್ದ ಪರೀಕ್ಷೆಯ ಗಂಟೆ ಬಾರಿಸುವ ಮುನ್ನ ನಡೆದ ಈ ಘಟನೆಯು ಅಭ್ಯರ್ಥಿಗಳು ಮತ್ತು ನೋಡುಗರನ್ನು ದಿಗ್ಭ್ರಮೆಗೊಳಿಸಿತು.

ಪರೀಕ್ಷೆಗಾಗಿ ಸುಮಾರು 300 ಇತರ ವಿದ್ಯಾರ್ಥಿಗಳೊಂದಿಗೆ ಈತ ಕೂಡ ಬೇಗನೆ ಬಂದಿದ್ದ. ಹಾಲ್ ಟಿಕೆಟ್ ಕಸಿದುಕೊಂಡ ಹದ್ದು ಶಾಲೆಯ ಮೇಲಿನ ಮಹಡಿಯ ಕಿಟಕಿಯ ಅಂಚಿನಲ್ಲಿ ಶಾಂತವಾಗಿ ಕುಳಿತಿತ್ತು. ಕಾಗದವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಸೇರಿದ್ದ ಜನರನ್ನು ನೋಡುತ್ತಿತ್ತು. ಗದ್ದಲ ಮತ್ತು ಕೆಳಗೆ ಜನಸಂದಣಿ ಸೇರಿದ್ದರೂ, ಹದ್ದು ಯಾವುದೇ ಆತಂಕವಿಲ್ಲದೆ ಕೆಲವು ನಿಮಿಷಗಳ ಕಾಲ ಹಾಲ್‌ ಟಿಕೆಟ್ ಹಿಡಿದುಕೊಂಡು ಕುಳಿತಿತ್ತು. ಕೊನೆಗೆ ಕೆಳಕ್ಕೆ ಹಾಕಿದೆ. ಘಟನೆ ಬಳಿಕ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, ಆತನಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.

See also  ಉಡುಪಿ: ಮೈಗೆ ಗ್ರೀಸ್ ಹಚ್ಚಿಕೊಂಡು ಚಡ್ಡಿಯಲ್ಲಿ ಕಳ್ಳತನಕ್ಕಿಳಿದ ಗ್ಯಾಂಗ್..!ಯಾರಿವರು? ಸಿಸಿಟಿವಿಯಲ್ಲಿ ದೃಶ್ಯ ಸೆರೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget