ಕರಾವಳಿ

ಕಾರಿನೊಳಗೆ ತೂರಿ ಹೋದ ಅಲ್ಯುಮಿನಿಯಂ ಪಟ್ಟಿ,ಸಂಭವಿಸಬಹುದಾದ ಅನಾಹುತ ತಪ್ಪಿತು

272

ನ್ಯೂಸ್ ನಾಟೌಟ್: ಮಂಗಳೂರಿನ ನಂತೂರು ವೃತ್ತದ ಬಳಿ ಅಲ್ಯುಮಿನಿಯಂ ಪಟ್ಟಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಎದುರಿನಲ್ಲಿದ್ದ ಕಾರಿನ ಒಳಗಡೆ ಅಲ್ಯುಮಿನಿಯಂ ಪಟ್ಟಿಗಳು ತೂರಿ ಹೋದ ಘಟನೆ ಸಂಭವಿಸಿದೆ. ಕಾರಿನ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕೆಪಿಟಿ ಕಡೆಯಿಂದ ಪಂಪ್ ವೆಲ್ ಕಡೆಗೆ ಹೋಗುತ್ತಿದ್ದ ಕಾರಿನ ಹಿಂಭಾಗದಲ್ಲಿ ಅಲ್ಯುಮಿನಿಯಂ ಪಟ್ಟಿಗಳನ್ನು ಸಾಗಿಸುತ್ತಿದ್ದ ಪಿಕಪ್ ಬರುತ್ತಿತ್ತು. ನಂತೂರು ಜಂಕ್ಷನ್ ಬಳಿ ಕಾರ್ ಚಾಲಕ ಬ್ರೇಕ್ ಹಾಕಿದಾಗ ಪಿಕಪ್ ನಲ್ಲಿದ್ದ ಅಲ್ಯುಮಿನಿಯಂ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳ ಹೊಕ್ಕಿದೆ. ಅಷ್ಟೇ ಅಲ್ಲದೇ ಅಲ್ಯುಮಿನಿಯಂ ಪಟ್ಟಿಗಳು ಕಾರಿನ ಹಿಂಭಾಗದ ಸೀಟಿನಿಂದ ನುಗ್ಗಿ ಚಾಲಕನ ಸೀಟಿಗೆ ತಾಗಿ ನಿಂತಿದೆ. ಕಾರಿನಲ್ಲಿ ಚಾಲಕರೊಬ್ಬರೇ ಪ್ರಯಾಣಿಸುತ್ತಿದ್ದು,ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಹಾನಿಯಾಗದ್ದು,ಪಿಕಪ್ ವಾಹನದ ನಿರ್ಲಕ್ಷ್ಯದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಬಾಳುಗೋಡು: ಮಾವ, ಸೊಸೆಯ ಮೇಲೆ ಕಾಡುಹಂದಿ ದಾಳಿ, ಸೌದೆಗೆಂದು ಹೋಗಿದ್ದಾಗ ದುರ್ಘಟನೆ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget