Uncategorized

ಕೇವಲ ಅರ್ಧ ಗಂಟೆ ದಾರಿಗೆ 33 ಗಂಟೆ ತಕೊಂಡ್ಲು ಈ ಬಾಲಕಿ ..!ಇದು ಉಚಿತ ಸಾರಿಗೆ ಪರಿಣಾಮವೋ..!ಪೋಷಕರು ಆತಂಕಗೊಂಡಿದ್ದೇಕೆ?

ನ್ಯೂಸ್ ನಾಟೌಟ್ : ಅಬ್ಬಬ್ಬಾ ಒಂದಲ್ಲ, ಎರಡಲ್ಲ ಬರೋಬ್ಬರಿ 33 ಗಂಟೆಗಳ ಕಾಲ ಬಸ್ಸಿನಲ್ಲೇ ಓಡಾಟ..ಕೇವಲ ಅರ್ಧ ಗಂಟೆ ದಾರಿಗೆ ೩೩ ಗಂಟೆ ಓಡಾಡಿದ್ಲು.. ಅಂದ ಹಾಗೆ ಕರ್ನಾಟಕದ ಶಕ್ತಿ ಯೋಜನೆಯಂತೆ ತೆಲಂಗಾಣದಲ್ಲೂ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗಾಗಿ ಫ್ರೀ ಬಸ್ ಯೋಜನೆ ಜಾರಿಯಾಗಿದೆ. ಆದರೆ ಇಲ್ಲೊಬ್ಬಳು ಬಾಲಕಿ ಬಸ್‌ ನಲ್ಲಿ ಓಡಾಡುವ ಎಲ್ಲಾ ದಾಹವನ್ನು ತಣಿಸಿಕೊಂಡಿದ್ದಾಳೆ.ಹೌದು, 8ನೇ ತರಗತಿ ವಿದ್ಯಾರ್ಥಿನಿಯು ಸತತ 33 ಗಂಟೆ ಉಚಿತ ಸಾರಿಗೆ ಬಸ್‌ಗಳಲ್ಲಿ ಓಡಾಡಿ ಪೋಷಕರಿಗೆ ಆತಂಕ ಮೂಡಿಸಿರೋ ಘಟನೆ ಬೆಳಕಿಗೆ ಬಂದಿದೆ. ಕೊನೆಗೆ 13 ವರ್ಷದ ಬಾಲಕಿಯನ್ನ ಪತ್ತೆ ಹಚ್ಚೋದಕ್ಕೆ ಪೊಲೀಸರು ಪರದಾಟ ನಡೆಸಿ ಯಶಸ್ವಿಯಾಗಿರುವ ಘಟನೆ ಇದೀಗ ವರದಿಯಾಗಿದೆ.

ಪೆದ್ದಪಲ್ಲಿ ಜಿಲ್ಲೆಯ 13 ವರ್ಷದ ಬಾಲಕಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದಳು. ಕ್ರಿಸ್‌ಮಸ್ ರಜೆ ಇದ್ದಿದ್ದರಿಂದ ಕರೀಮ್‌ನಗರದ ತನ್ನ ಅಜ್ಜಿ ಮನೆಗೆ ಹೋಗಿದ್ದಾಳೆ. ಅಲ್ಲಿಂದ ಹಾಸ್ಟೆಲ್‌ಗೆ ವಾಪಸ್ ಬರುವುದಾಗಿ ಬಸ್ ಹತ್ತಿದ್ದು ಕಾಣೆಯಾಗಿದ್ದಾರೆ. ಕರೀಂನಗರದಲ್ಲಿ ಬಸ್ ಹತ್ತಿಸಿದ ಅಜ್ಜಿ, ಬಾಲಕಿಯ ತಂದೆಗೆ ಹೇಳಿದ್ದಾರೆ. ಹೈದರಾಬಾದ್ ಬಳಿ ಬಸ್‌ಗಾಗಿ ಬಾಲಕಿಯ ತಂದೆ ಕಾಯುತ್ತಿದ್ದರು. ಆದರೆ ಎಷ್ಟೇ ಹೊತ್ತು ಕಾದರೂ ಬರಲೇ ಇಲ್ಲ..!

ಸಾರಿಗೆ ಬಸ್ ಬಂದರೂ ಮಗಳು ಬಾರದೇ ಇದ್ದಾಗ ಗಾಬರಿಯಾದ ತಂದೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಗಳ ಫೋಟೋದೊಂದಿಗೆ ಎಲ್ಲಾ ಕಡೆ ಹುಡುಕಲು ಆರಂಭಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಬಾಲಕಿಯ ಫೋಟೋ ಶೇರ್ ಮಾಡಿ ಯಾರಾದ್ರೂ ನೋಡಿದ್ರೆ ಸುಳಿವು ನೀಡುವಂತೆ ಮನವಿ ಮಾಡಿದ್ದರು. ಕೊನೆಗೆ ಒಬ್ಬ ಯುವಕ ಬಾಲಕಿಯ ಫೋಟೋವನ್ನು ನೋಡಿ ನಾನು ಕರೀಮ್‌ನಗರದಲ್ಲಿ ನೋಡಿರೋದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಹೈದರಾಬಾದ್ ಪೊಲೀಸರು ಹಲವು ಸಾರಿಗೆ ಬಸ್‌ಗಳ ಹಿರಿಯ ಅಧಿಕಾರಿಗಳನ್ನ ವಿಚಾರಿಸಿದಾಗ 8ನೇ ತರಗತಿ ವಿದ್ಯಾರ್ಥಿನಿ ಸಂಚರಿಸಿರೋ ವಿಷಯ ಗೊತ್ತಾಗಿದೆ. ಕೆಲವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಬಾಲಕಿಯ ಗುರುತು ಪತ್ತೆಯಾಗಿದೆ. ಕೊನೆಯದಾಗಿ ಸಾರಿಗೆ ಬಸ್‌ನಲ್ಲಿ ಬಾಲಕಿ ಪತ್ತೆಯಾಗಿದ್ದು, ಆಕೆ ಹೇಳಿದ ಕಾರಣ ಕೇಳಿ ಬೆಚ್ಚಿ ಬಿದ್ದಿದ್ದಾರೆ. 13 ವರ್ಷದ ಬಾಲಕಿಗೆ ಹಾಸ್ಟೆಲ್‌ಗೆ ವಾಪಸ್ ಆಗಲು ಇಷ್ಟವಿರಲಿಲ್ಲ. ಹೀಗಾಗಿ ಉಚಿತ ಸಾರಿಗೆ ಬಸ್‌ಗಳಲ್ಲಿ ಒಂದಾದ ಮೇಲೆ ಮತ್ತೊಂದು ಬಸ್‌ಗಳಲ್ಲಿ ಸಂಚರಿಸಿದ್ದಾಳೆ. ಸತತ 33 ಗಂಟೆಗಳ ಕಾಲ ಸಂಚರಿಸಿದ ಬಳಿಕ ಕೊನೆಗೆ ಬಾಲಕಿಯು ಪೋಷಕರಿಗೆ ಸಿಕ್ಕಿದ್ದಾಳೆ..!

Related posts

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ 53 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ ಯಾಕೆ?ಇದಕ್ಕೆ ರಾಹುಲ್ ಗಾಂಧಿ ನೀಡಿದ ಉತ್ತರವೇನು?

ಜಡ್ಜ್‌, ಪೊಲೀಸ್‌ ಅಧಿಕಾರಿಗಳ ಹತ್ಯೆಗೂ ಪಿಎಫ್‌ಐ ಸ್ಕೆಚ್‌

ರಾಮನಗರದಲ್ಲಿ ಕಣ್ಣು ತೆರೆದ ಶಿವ .. ವಿಸ್ಮಯ ನೋಡಲು ಹರಿದು ಬಂದ ಜನ ಸಾಗರ!