ಕರಾವಳಿ

ಬರೋಬ್ಬರಿ ಏಳು ವರ್ಷಗಳ ನಂತರ ‘ಚೆಲುವಿನ ಚಿತ್ತಾರ’ ಬೆಡಗಿ ಕಮ್ ಬ್ಯಾಕ್..! ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ‘ಕರಾವಳಿ’ಯಲ್ಲಿ ಅಮೂಲ್ಯ..!

102

ನ್ಯೂಸ್‌ ನಾಟೌಟ್‌ : ಬರೋಬ್ಬರಿ ಏಳು ವರ್ಷಗಳ ಬಳಿಕ ಚೆಲುವಿನ ಚಿತ್ತಾರ ಬೆಡಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.ಕೊನೆಯದಾಗಿ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ, ಮದುವೆಯಾದ ನಂತರ ಮತ್ತು ಅವಳಿ ಗಂಡು ಮಕ್ಕಳ ಆರೈಕೆಗಾಗಿ ಬ್ರೇಕ್ ತೆಗೆದುಕೊಂಡಿದ್ದರು.

ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಅವರ ಬಹು ನಿರೀಕ್ಷಿತ ಸಿನಿಮಾ ಕರಾವಳಿ ಮೂಲಕ ಅಮೂಲ್ಯ ಪುನಾರಾಗಮನ ಮಾಡುತ್ತಿದ್ದಾರೆ ಎನ್ನಲಾಗಿದೆ.ಪ್ರತಿಭಾವಂತ ಕಲಾವಿದರ ಹುಡುಕಾಟದಲ್ಲಿದ್ದ ನಿರ್ದೇಶಕರು, ಆ ಪಾತ್ರಕ್ಕೆ ಅಮೂಲ್ಯ ಸೂಕ್ತ ಎಂದು ನಿರ್ಧರಿಸಿ,ಈ ಸಂಬಂಧ ನಟಿಯ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶ್ರಾವಣಿ ಸುಬ್ರಹ್ಮಣ್ಯ ನಟಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅತೀ  ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಬಾಲ ಕಲಾವಿದೆಯಾಗಿ ಸಿನಿಮಾ ಪಯಣ ಆರಂಭಿಸಿದ ಅಮೂಲ್ಯ 13ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರೊಂದಿಗೆ ಕರಾವಳಿಯಲ್ಲಿ ತೆರೆ ಹಂಚಿಕೊಳ್ಳಲಿದ್ದು,ಕರಾವಳಿಯು ಈಗಾಗಲೇ ಫಸ್ಟ್ ಲುಕ್‌ನೊಂದಿಗೆ ಕುತೂಹಲ ಕೆರಳಿಸಿದೆ.ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ಒಳಗೊಂಡಿದೆ. ಪ್ರಜ್ವಲ್ ದೇವರಾಜ್ ವಿಶಿಷ್ಟ ಫಸ್ಟ್ ಲುಕ್ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುಳಿವು ನೀಡುತ್ತದೆ.

ಅಮೂಲ್ಯ ಪಾತ್ರವು ಕಥೆಗೆ ಆಸಕ್ತಿದಾಯಕ ಆಯಾಮವನ್ನು ತರಲು ಸಿದ್ಧವಾಗಿದೆ. ಏತನ್ಮಧ್ಯೆ, ನಿರ್ದೇಶಕರು ಉಳಿದ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ. ಫೆಬ್ರವರಿ ಮಧ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಪ್ಲಾನ್ ಮಾಡಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ.ಅಂಬಿ ನಿಂಗ್ ವಯಸ್ಸಾಯ್ತೋ ನಂತರ ನಿರ್ದೇಶಕ ಗುರುದತ್ತ ಗಾಣಿಗ ಎರಡನೇ ಸಿನಿಮಾ ಕರಾವಳಿ.

See also  ವಿಟ್ಲ:18 ದಿನಗಳ ಬಳಿಕ ದಫನ ಮಾಡಿದ ಮೃತದೇಹ ಹೊರತೆಗೆದು ತನಿಖೆ..! ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದ್ದ ಪತ್ನಿ..!
  Ad Widget   Ad Widget   Ad Widget   Ad Widget   Ad Widget   Ad Widget