ದೇಶ-ವಿದೇಶ

ಭಾರತದಾದ್ಯಂತ ಲೀಟರ್‌ ಹಾಲಿಗೆ 1 ರೂ. ಕಡಿಮೆ ಮಾಡಿದ ಅಮುಲ್..! ಗ್ರಾಹಕರಿಗೆ ಸಿಹಿ ಸುದ್ದಿ

199

ನ್ಯೂಸ್ ನಾಟೌಟ್: ಅಮುಲ್ ತನ್ನ 1 ಲೀಟರ್ ಪ್ಯಾಕ್‌ಗಳಾದ ಗೋಲ್ಡ್, ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ಬೆಲೆಯನ್ನು 1 ರೂ. ಕಡಿಮೆ ಮಾಡಿದೆ. ಈ ಕಡಿತವು 1 ಲೀಟರ್ ಪ್ಯಾಕ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಕಳೆದ ವರ್ಷ ಜೂನ್‌ನಲ್ಲಿ ಅಮುಲ್ ತನ್ನ ಎಲ್ಲಾ ಮಾದರಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಇದೀಗ ಅಮುಲ್ ಹಾಲಿನ ಪ್ಯಾಕ್​ಗಳ ಬೆಲೆ ಲೀಟರ್​ಗೆ 1 ರೂ. ಕಡಿಮೆಯಾಗಿರುವುದನ್ನು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (GCMMF) ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಘೋಷಿಸಿದ್ದಾರೆ.

ಅಮುಲ್ ಹಾಲಿನ ಬೆಲೆ ಬದಲಾವಣೆಯ ನಂತರ, 1 ಲೀಟರ್ ಅಮುಲ್ ಗೋಲ್ಡ್ ಹಾಲಿನ ಪೌಚ್‌ನ ಬೆಲೆ 66 ರೂ.ಗಳಿಂದ 65 ರೂ.ಗಳಿಗೆ ಇಳಿಯಲಿದೆ. 1 ಲೀಟರ್ ಅಮುಲ್ ಟೀ ಸ್ಪೆಷಲ್ ಹಾಲಿನ ಪೌಚ್‌ನ ಬೆಲೆ 62 ರೂ.ಗಳಿಂದ 61 ರೂ.ಗಳಿಗೆ ಇಳಿಯಲಿದೆ. ಅದೇ ರೀತಿ, ಅಮುಲ್ ತಾಜಾ ಹಾಲಿನ ದರವನ್ನು ಲೀಟರ್‌ಗೆ 54 ರೂ.ಗಳಿಂದ 53 ರೂ.ಗಳಿಗೆ ಇಳಿಸಲಾಗುವುದು.

ಈ ಮೊದಲು 2024ರ ಜೂನ್ ತಿಂಗಳಲ್ಲಿ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿತ್ತು. ಅಮುಲ್ ಹಾಲಿನ ಬೆಲೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಿದ ನಂತರ ಮದರ್ ಡೈರಿ ಕೂಡ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಹಾಲಿನ ಬೆಲೆಗಳನ್ನು ಕಡಿಮೆ ಮಾಡುವ ಅಮುಲ್ ನಿರ್ಧಾರವು ಇತರ ಡೈರಿ ಕಂಪನಿಗಳು ಕೂಡ ಇದನ್ನು ಅನುಸರಿಸುವಂತೆ ಪ್ರಭಾವ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.

See also  ವೈದ್ಯೆಯ ಹತ್ಯೆ ಮತ್ತು ಅತ್ಯಾಚಾರ ಕೇಸ್ ಗೆ ಟ್ವಿಸ್ಟ್..! ಪ್ರಾಥಮಿಕ ತನಿಖೆ ನಡೆಸಿದ್ದ ಠಾಣಾಧಿಕಾರಿಯೇ ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget