ಕರಾವಳಿದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌ ಗೆ ವೀಸಾ ನಿರಾಕರಿಸಿದ ಅಮೆರಿಕ..! ಇಲ್ಲಿದೆ ಸಂಪೂರ್ಣ ಮಾಹಿತಿ

258

ನ್ಯೂಸ್ ನಾಟೌಟ್: ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತಿದ್ದ ಶಿಲ್ಪಿ ಅರುಣ್‌ ಯೋಗಿರಾಜ್‌ ಗೆ ಅಮೆರಿಕಾವು ವೀಸಾ ನಿರಾಕರಣೆ ಮಾಡಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಮೆರಿಕದ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇದೇ ಆಗಸ್ಟ್‌ 30 ರಿಂದ ಸೆಪ್ಟೆಂಬರ್ 1 ರವರೆಗೂ 12ನೇ ಅಕ್ಕಾ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ಇದರಲ್ಲಿ ಭಾಗಿಯಾಗಲು ಯೋಗಿರಾಜ್ ಸಿದ್ದರಾಗಿದ್ದರು. ಆದರೆ, ವೀಸಾ ನಿರಾಕರಣೆಯಾದ ಹಿನ್ನೆಲೆ ಸಮಸ್ಯೆಯಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಟೆಕ್ಸಾಸ್ ರಾಜ್ಯದ ಹೂಸ್ಟನ್ ಕನ್ನಡ ವೃಂದವರಿಂದ ಮೊಟ್ಟಮೊದಲ ‘ಅಕ್ಕಾ ವಿಶ್ವ ಕನ್ನಡ ಸಮ್ಮೇಳನ’ ದ ಶುಭಾರಂಭವಾಗಿದೆ. ಆ ಬಳಿಕ ಸಾಕಷ್ಟು ಮಂದಿ ಕನ್ನಡಿಗರು ಸೇರಿದಂತೆ ದೇಶದ ಪ್ರಮುಖರು ಈ ಸಮ್ಮೇಳನಕ್ಕೆ ತೆರಳುತ್ತಾರೆ. ಇದರಲ್ಲಿ ಭಾಗವಹಿಸಿ ಗೌರವ ಸ್ವೀಕರಿಸಲು ಶಿಲ್ಪಿ ಅರುಣ್‌ ಯೋಗಿರಾಜ್‌ ಗೆ ವಿಶೇಷ ಆಹ್ವಾನ ಬಂದಿತ್ತು, ಆದರೆ ಅಮೆರಿಕ ಇವರಿಗೆ ವೀಸಾ ನಿರಾಕರಿಸಿದೆ ಎನ್ನಲಾಗಿದೆ.

Click

https://newsnotout.com/2024/08/renuka-swamy-and-darshan-case-pavitra-gowda-issue-another-evidence/
https://newsnotout.com/2024/08/ayodya-main-street-lights-are-theft-by-unkown-and-fir-kananda-news/
https://newsnotout.com/2024/08/couple-issue-kannada-news-divorce-matter-ends-in-tragedy/
See also  ಯುವತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ದಾಳಿ..! ಖಾಸಗಿ ಸಂಸ್ಥೆಯಲ್ಲಿ ಒಟ್ಟಿಗೆ ದುಡಿಯುತ್ತಿದ್ದ ಇಬ್ಬರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget