ನ್ಯೂಸ್ ನಾಟೌಟ್: ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ಸಿನಿಮಾದಲ್ಲಿ ನಟಿಸಿದ ಆರೋಪವಿದೆ.
ಮಲೆಯಾಳಂ ಸಿನಿಮಾದಲ್ಲಿ ಮಸಾಲ ದೃಶ್ಯಗಳಲ್ಲಿ ನಟಿಸಿದ ಪಡ್ಡೆ ಹುಡುಗರ ಎದೆಗೆ ಕಿಚ್ಚಿಟ್ಟಿದ್ದ ಈ ನಟಿ ವಿರುದ್ಧ ಸಾಕಷ್ಟು ಪರ-ವಿರೋಧದ ಚರ್ಚೆಯಾಗಿತ್ತು. ಇದೀಗ ಎಲ್ಲವನ್ನು ಮೀರಿದ ನಟಿ ಟೀಕೆ ಟಿಪ್ಪಣಿಗಳ ಹೊರತಾಗಿಯೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA)ದ ಅಧ್ಯಕ್ಷರಾಗಿ ಆಯ್ಕೆಯಾಗಿದೆ.
ಶ್ವೇತಾ ಮೆನನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಅವರು ಅಶ್ಲೀಲ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಮಾಡಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಯಿತೇ ಎನ್ನುವ ಪ್ರಶ್ನೆ ಮೂಡಿತ್ತು. ಈಗ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಸ್ಥಾಪನೆಯಾದಾಗಿನಿಂದ ಇದೇ ಮೊದಲ ಬಾರಿಗೆ ಇದರ ಚುಕ್ಕಾಣಿ ಮಹಿಳೆಯರ ಪಾಲಾಗಿದ್ದು, ಇತಿಹಾಸ ನಿರ್ಮಾಣ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ, ಅನೇಕರಿಗೆ ಕಿರುಕುಳ ಆಗಿದೆ ಎಂಬ ಆರೋಪ ಹೆಚ್ಚಿದ ಬೆನ್ನಲ್ಲೇ ಈ ರೀತಿಯ ಮಹತ್ವದ ಬೆಳವಣಿಗೆ ನಡೆದಿದೆ ಅನ್ನೋದು ವಿಶೇಷ. ಶ್ವೇತಾ ಮೆನನ್ ಅವರು ಅಧ್ಯಕ್ಷರಾಗಿ ಹಾಗೂ ಕುಕ್ಕು ಪರಮೇಶ್ವರನ್ ಅವರು ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಆಗಸ್ಟ್ 15ರಂದು ‘ಅಮ್ಮ’ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಶ್ವೇತಾ ವಿರುದ್ಧ ದೇವನ್ ಹಾಗೂ ಕುಕ್ಕು ಪರಮೇಶ್ವರನ್ ವಿರುದ್ಧ ರವೀಂದ್ರನ್ ಸ್ಪರ್ಧೆ ಮಾಡಿದ್ದರು. ಆದರೆ, ಹೀರೋಗಳಿಗೆ ಸೋಲಾಗಿದೆ. ಈ ಸಂಘ ರಚನೆಗೊಂಡು ಮೂರು 30 ವರ್ಷಗಳ ಮೇಲಾಗಿದೆ. ಆದರೆ, ಈವರೆಗೆ ನಟಿಯರು ಇದಕ್ಕೆ ಆಯ್ಕೆ ಆಗಿರಲಿಲ್ಲ ಅನ್ನೋದು ವಿಶೇಷ.
2024ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಆಯಿತು. ಮಲಯಾಳಂ ಸಿನಿಮಾದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆ ಎದರಿಸುತ್ತಿದ್ದಾರೆ ಎಂದು ಹೇಮಾ ಸಮಿತಿಯು ವರದಿ ನೀಡಿತು. ಇದರ ಬೆನ್ನಲ್ಲೇ ಮೋಹನ್ ಲಾಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಈ ಸ್ಥಾನಗಳು ಖಾಲಿ ಉಳಿದುಕೊಂಡಿದ್ದವು.