Latest

ಈ ಒಳಉಡುಪಿನ ಬೆಲೆಯಲ್ಲಿ ಸರಳ ಮನೆಯನ್ನೇ ಕಟ್ಟಿಬಿಡಬಹುದು!! 7 ಲಕ್ಷ ರೂ. ಬೆಲೆಯಿರುವ ಈ ಅಂಡರ್‌ ವೇರ್‌ ನ ವಿಶೇಷತೆಗಳೇನು ಗೊತ್ತಾ?ಅಬ್ಬಬ್ಬಾ, ನಿಮ್ಗೂ ಶಾಕ್ ಆಗುತ್ತೆ..

1.1k
Spread the love

ನ್ಯೂಸ್‌ ನಾಟೌಟ್: ಕೆಲವೊಮ್ಮೆ ಐತಿಹಾಸಿಕ ಹಿನ್ನೆಲೆಯಿರುವ ವಸ್ತುಗಳು, ಸೆಲೆಬ್ರಿಟಿಗಳ ಉಡುಪುಗಳು, ಅವರು ಬಳಸಿದಂತಹ ವಸ್ತುಗಳು, ಹಸು, ಎಮ್ಮೆ , ಅಂಗಡಿ ಹೀಗೆ ಬೆಲೆ ಬಾಳುವ ವಸ್ತುಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ. ಜನರಿಗೆ ಕ್ರೇಜ್ ಹೇಗಿದೆಯೋ ಹಾಗೆ ಕೆಲವೊಮ್ಮೆ ಸೆಲೆಬ್ರಿಟಿಗಳು ಇಷ್ಟವಾದರೆ ಅವರ ಡ್ರೆಸ್ ಗಳನ್ನು ಲಕ್ಷ-ಲಕ್ಷ, ಕೋಟಿಗಟ್ಟಲೆ ಹಣ ಸುರಿದು ಖರೀದಿ ಮಾಡುವವರೂ ಇದ್ದಾರೆ. ಅದೇ ರೀತಿ ಇದೀಗ ಇಲ್ಲೊಂದು ಹರಾಜಿನಲ್ಲಿ ಚಡ್ಡಿ ಬರೋಬ್ಬರಿ 7 ಲಕ್ಷ ರೂ. ದಾಖಲೆ ಬೆಲೆಗೆ ಸೇಲ್ ಆಗಿದೆ. ಅಷ್ಟಕ್ಕೂ ದುಬಾರಿ ಬೆಲೆಗೆ ಹರಾಜಾದ ಈ ಒಳಉಡುಪಿನ ವಿಶೇಷತೆ ಬಗ್ಗೆ ಇಲ್ಲಿ ತಿಳಿದು ಕೊಳ್ಳಿ…

ವಿಶಿಷ್ಟ ಹರಾಜಿನಲ್ಲಿ, ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ (ಜೆಎಫ್ ಕೆ) ಧರಿಸಿದ್ದ ಒಳ ಉಡುಪು 7.5 ಲಕ್ಷ ರೂ.ಗೆ ಮಾರಾಟವಾಗಿದೆ. 1940 ರ ದಶಕದ ಈ ಒಳ ಉಡುಪುಗಳ ಮೇಲೆ ‘Jack’ ಎಂಬ ಕಸೂತಿ ಮಾಡಲಾಗಿತ್ತು. ಹೆಚ್ಚಿನ ಬಿಡ್ ನಿಂದಾಗಿ ಈ ಹರಾಜು ಚರ್ಚೆಯ ವಿಷಯವಾಗಿತ್ತು. ಕೊನೆಗೆ ಇದು $9,100 ಡಾಲರ್‌ ಅಂದ್ರೆ ಸುಮಾರು ರೂ. 7.5 ಲಕ್ಷ ರೂ. ಗೆ ಮಾರಾಟವಾಗಿದೆ.

ಮಾತ್ರವಲ್ಲ ಈ ಹರಾಜಿನಲ್ಲಿ ಫೇಸ್‌ಬುಕ್‌ ಸಹ-ಸಂಸ್ಥಾಪಕ ಮಾರ್ಕ್‌ ಜುಕರ್ ಬರ್ಗ್ ಗೆ ಸೇರಿದ ಹೂಡಿ ಮತ್ತು ಆಪಲ್‌ ಸಹ-ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರ ಬೋ ಟೈಯನ್ನು ಕೂಡಾ ಹರಾಜಿನಲ್ಲಿ ಇಡಲಾಗಿತ್ತು. ಇನ್ನೂ ಮಾರ್ಕ್‌ ಜುಕರ್ ಬರ್ಗ್ ಹೂಡಿ ಬಟ್ಟೆ $15,875 (ಸುಮಾರು 13 ಲಕ್ಷ ರೂ.) ಗೆ ಮಾರಾಟವಾಯಿತು. ಈ ವಿಶಿಷ್ಟ ಹರಾಜಿನ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗ್ಲೇ ಗೊತ್ತಾಗಿರಬಹುದು ಈ ಘಟನೆ ಎಲ್ಲಿ ನಡೆದಿದೆ ಎಂದು , ಯೆಸ್ ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ನಡೆದ ಘಟನೆಯಿದು.

 

 

View this post on Instagram

 

A post shared by News not out (@newsnotout)

See also  ರಶ್ಮಿಕಾ ಮಂದಣ್ಣಗೆ ಟೀಕೆ ಮಾಡಿದ್ದ ಶಾಸಕನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು..! ಪ್ರಚಾರಕೋಸ್ಕರ ಪತ್ರ ಬರೆದಿರಬಹುದು ಎಂದ ಶಾಸಕ..!
  Ad Widget   Ad Widget   Ad Widget   Ad Widget