ದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಅಮೆರಿಕದಲ್ಲೂ ರಾಮನಿಗೆ ವಿಶೇಷ ಪೂಜೆ, ಟೆಸ್ಲಾ ಕಾರುಗಳ ಲೈಟ್ ನಲ್ಲಿ ಮೂಡಿದ ರಾಮ ನಾಮ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ವಿದೇಶದಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿದೆ.

ಅಮೆರಿಕದಲ್ಲಿ ನೆಲೆಸಿರುವ ಧಾರವಾಡ ಜಿಲ್ಲೆಯ ದಂಪತಿ ಮನೆಯಲ್ಲಿಯೇ ರಾಮ ಮಂಟಪವನ್ನು ನಿರ್ಮಿಸಿ ಪೂಜೆ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ಶಶಿಧರ್ ಚಾಕಲಬ್ಬಿ, ಪತ್ನಿ ಸಾನ್ವಿ ಚಾಕಲಬ್ಬಿ ಅವರು ಅಮೆರಿಕದ ಸ್ಯಾಂಡಿಯಾಗೋದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯರು ಎನ್ನಲಾಗಿದೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ಈ ದಂಪತಿ ಅಮೆರಿಕದಲ್ಲಿ ಮಂಟಪದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ, ಭಕ್ತಿ ತೋರಿದ್ದಾರೆ.
ಕಳೆದ 5 ವರ್ಷಗಳಿಂದ ಈ ದಂಪತಿ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಮೆರಿಕದ ಹ್ಯೂಸ್ಟನ್ ಪ್ರದೇಶದಲ್ಲಿರುವ ಭಾರತೀಯರು ವಿಶೇಷವಾಗಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕಾರಿನ ಲೈಟ್ ನಲ್ಲಿ ರಾಮ ಎಂದು ಮೂಡುವಂತೆ ಟೆಸ್ಲಾ ಕಾರುಗಳನ್ನು ನಿಲ್ಲಿಸಿ ರಾಮನ ಮೇಲಿನ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾರೆ. ರಾಮನಾಮ ಜಪ ಮಾಡಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Related posts

ಉಡುಪಿ: ನಮಾಜ್ ಮಾಡುತ್ತಿರುವಾಗಲೇ ಹೃದಯಾಘಾತ..! ಇಲ್ಲಿದೆ ಮನಕಲಕೋ ಘಟನೆ

ಶಾಲೆಗೆ ರಜೆ ಬೇಕೆಂದು ನೀರಿಗೆ ಇಲಿ ಪಾಷಾಣ ಹಾಕಿದನಾ ವಿದ್ಯಾರ್ಥಿ..? ಮುಂದೇನಾಯ್ತು..?

ಇಸ್ರೋ ವಿಜ್ಞಾನಿಗೆ ಹೃದಯಾಘಾತ..!,ಚಂದ್ರಯಾನ-3ರ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ವಲರ್ಮತಿ ಇನ್ನಿಲ್ಲ..