Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಮೆರಿಕ ಅಧ್ಯಕ್ಷರನ್ನು ಕೊಲ್ಲಲು ಹಣಬೇಕೆಂದು ಹೆತ್ತವರನ್ನೇ ಕೊಂದ ಬಾಲಕ..! ಒಂದು ವಾರಗಳ ಕಾಲ ಹೆಣಗಳ ಜೊತೆ ವಾಸ..!

562

ನ್ಯೂಸ್ ನಾಟೌಟ್: ಅಮೆರಿಕ ಅಧ್ಯಕ್ಷಡೊನಾಲ್ಡ್ ಟ್ರಂಪ್ ಅನ್ನು ಹತ್ಯೆ ಮಾಡಲು 17 ವರ್ಷದ ಬಾಲಕ ನಿಕಿತಾ ಕ್ಯಾಸಪ್ ಎಂಬಾತ ಪ್ಲಾನ್ ಮಾಡಿದ್ದ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ. ಡೊನಾಲ್ಡ್​ ಟ್ರಂಪ್​ ಕೊಲ್ಲಲು ಸಾಕಷ್ಟು ಹಣ ಖರ್ಚು ಮಾಡಬೇಕಾಗಬಹುದು ಎನ್ನುವ ಕಾರಣಕ್ಕೆ ತನ್ನ ಹೆತ್ತವರನ್ನೇ ಕೊಂದು ಅವರ ಹಣವನ್ನು ದೋಚಿ ಈತ ಪರಾರಿಯಾಗಿದ್ದ ಎನ್ನಲಾಗಿದೆ.

ಟ್ರಂಪ್ ರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಗುರಿಯೊಂದಿಗೆ, ಅವನು ಮೊದಲು ತನ್ನ ಹೆತ್ತವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 11 ರಂದು ವೌಕೇಶಾದಲ್ಲಿ ತನ್ನ ತಾಯಿ 35 ವರ್ಷದ ಟಟಿಯಾನಾ ಕಾಸಾಪ್ ಮತ್ತು ಮಲತಂದೆ 51 ವರ್ಷದ ಡೊನಾಲ್ಡ್ ಮೇಯರ್ ಅವರನ್ನು ಗುಂಡು ಹಾರಿಸಿ ಕ್ಯಾಸಪ್ ಹತ್ಯೆಗೈದಿದ್ದಕ್ಕಾಗಿ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ, ತನಿಖೆಯ ಬಳಿಕ ಇದೀಗ ಹತ್ಯೆಯ ಹಿಂದಿನ ನೈಜ್ಯ ಕಾರಣ ಬಯಲಾಗಿದೆ.

ವಾರಂಟ್‌ ನಲ್ಲಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಲಾಗಿದೆ. ಫೆಬ್ರವರಿಯಲ್ಲಿ ಮಿಲ್ವಾಕಿ ಅವರ ನಿವಾಸದಲ್ಲಿ ಕ್ಯಾಸಪ್ ಇಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿ ಕೊಳೆತ ದೇಹದೊಂದಿಗೆ ವಾರಗಳ ಇದ್ದು ನಂತರ 14,000ಡಾಲರ್ ನಗದು ಮತ್ತು ಪಾಸ್ ​ಪೋರ್ಟ್​ ಮತ್ತು ನಾಯಿಯೊಂದಿಗೆ ಪರಾರಿಯಾಗಿದ್ದ. ಮಾರ್ಚ್‌ನಲ್ಲಿ, ಅಧಿಕಾರಿಗಳು ಆತನನ್ನು ಕಾನ್ಸಾಸ್‌ ನಿಂದ ಬಂಧಿಸಿದ್ದರು ಎಂದು ವರದಿ ತಿಳಿದಿದೆ.

ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ..! 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದ

See also  ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget