Latestದೇಶ-ವಿದೇಶವೈರಲ್ ನ್ಯೂಸ್

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ ಎಂದು ಹೊಗಳಿದ ಅಮೆರಿಕ..! ಪಾಕಿಸ್ತಾನ ಸೇನಾ ಮುಖ್ಯಸ್ಥನನ್ನು ಆಹ್ವಾನಿಸಲು ಟ್ರಂಪ್ ಮುಂದಾಗಿದ್ದಾರೆ ಎಂದ ಅಮೆರಿಕಾ ಸೇನಾ ಕಮಾಂಡರ್..!

273

ನ್ಯೂಸ್ ನಾಟೌಟ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಅದ್ಭುತ ಪಾಲುದಾರ ಎಂದು ಅಮೆರಿಕಾದ ಸೆಂಟ್ರಲ್ ಕಮಾಂಡ್ (ಸೆಂಟ್‌ ಕಾಮ್) ನ ಕಮಾಂಡರ್ ಜನರಲ್ ಮೈಕೆಲ್ ಕುರಿಲ್ಲಾ ಬಣ್ಣಿಸಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಅಸೀಮ್‌ ಮುನೀರ್‌ ಅವರನ್ನು ಆಹ್ವಾನಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಈ ನಡುವೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್-ಖೋರಾಸನ್) ಉಗ್ರರನ್ನು ಸದೆಬಡಿಯುವಲ್ಲಿ ಪಾಕಿಸ್ತಾನ ನೀಡಿದ ಸಹಕಾರ ನೀಡಿದೆ ಎಂದು ಅಮೆರಿಕ ಮಿಲಿಟರಿ ಕಮಾಂಡರ್‌ ಹಾಡಿ ಹೊಗಳಿದ್ದಾರೆ.

ಅಮೆರಿಕದ ಸಂಸತ್ತಿನಲ್ಲಿ ಸಶಸ್ತ್ರ ಸೇವೆಗಳ ಸಮಿತಿ ವಿಚಾರಣೆ ಸಂದರ್ಭದಲ್ಲಿ ಕುರಿಲ್ಲಾ ಮಾತನಾಡಿದ್ದು, ಇಸ್ಲಾಮಾಬಾದ್‌ ಪಾತ್ರವನ್ನು ಹಾಡಿಹೊಗಳಿದ ಘಟನೆ ನಡೆದಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಯೋತ್ಪಾದನೆ ಪ್ರಾಯೋಜಿತ ಪಾಕ್‌ ಮುಖವಾಡವನ್ನು ಬಯಲು ಮಾಡಲು ಭಾರತ ಸರ್ವಪಕ್ಷ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿದೆ. ಈ ಹೊತ್ತಿನಲ್ಲೇ ಪಾಕಿಸ್ತಾನವನ್ನು ಅಮೆರಿಕ ಮಿಲಿಟರಿ ಅಧಿಕಾರಿ ಹಾಡಿಹೊಗಳಿದ್ದಾರೆ. ಅಲ್ಲದೇ ನಾವು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದಾಗಿಯೂ ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನ ಪ್ರಸ್ತುತ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ, ಹಾಗೂ ಭಯೋತ್ಪಾದನೆ ನಿಗ್ರಗದಲ್ಲಿ ಅಭೂತಪೂರ್ವ ಪಾಲುದಾರನಾಗಿದೆ ಎಂದರಲ್ಲದೇ ನವದೆಹಲಿ ಮತ್ತು ಇಸ್ಲಾಮಾಬಾದ್/ರಾವಲ್ಪಿಂಡಿ ಎರಡರೊಂದಿಗೂ ವಾಷಿಂಗ್ಟನ್ ಬಲವಾದ ಸಂಬಂಧ ಹೊಂದಿರಬೇಕು. ಭಯೋತ್ಪಾದನೆಯ ವಿರುದ್ಧದ ಅಮೆರಿಕದ ಹೋರಾಟಕ್ಕೆ ಭಾರತ, ಪಾಕಿಸ್ತಾನ ಎರಡೂ ರಾಷ್ಟ್ರಗಳ ನೆರವು ಬೇಕೆಂದು ಮನವಿ ಮಾಡಿದೆ.

ಕೊಲ್ಲೂರು ಶ್ರೀಮೂಕಾಂಬಿಕೆಗೆ ಭಕ್ತರಿಂದ ಚಿನ್ನದ ಮುಖವಾಡ..! 45 ವರ್ಷಗಳ ಹಿಂದೆ ಹೇಳಿಕೊಂಡಿದ್ದ ಹರಕೆ..!

ಚಾಕು ನುಂಗಿ ಒದ್ದಾಡಿದ ನಾಗರ ಹಾವು..! ಹಾವನ್ನು ರಕ್ಷಿಸಿದ್ದೇ ರೋಚಕ..!

See also  ಹಿಮಾಚಲ ಪ್ರದೇಶದಲ್ಲಿ ಕೆಫೆ ಆರಂಭಿಸಿದ ನಟಿ ಕಂಗನಾ ರಣಾವತ್..! ವಿವಾದಿತ ಎಮರ್ಜೆನ್ಸಿ ಚಿತ್ರ ಯಶಸ್ಸು ಕಾಣಲಿಲ್ಲವೆಂದು ಬಿಸಿನೆಸ್ ಗೆ ಇಳಿದ್ರಾ ಸಂಸದೆ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget