Latestದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಅಮೆರಿಕದ ತೆರಿಗೆ ನೀತಿಯ ವಿರುದ್ಧ ಹೋರಾಟಕ್ಕೆ ಭಾರತ ಜೊತೆಗೂಡುವಂತೆ ಚೀನಾದಿಂದ ಮನವಿ, ಎನಿದು ವ್ಯಾಪಾರ ಸಮರ..?

626

ನ್ಯೂಸ್ ನಾಟೌಟ್: ಇತ್ತೀಚಿನ ಅಮೆರಿಕದ ಸುಂಕ ಹೆಚ್ಚಳ ನೀತಿಯಿಂದ ಉಲ್ಬಣಗೊಂಡಿರುವ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ, ಚೀನಾ ಮತ್ತು ಭಾರತದ ನಡುವೆ ಐಕ್ಯಮತ ಮೂಡಬೇಕಾದ ಅಗತ್ಯವಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಸೂಚನೆಯ ಮೇರೆಗೆ ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಕರೆ ನೀಡಿದೆ.

ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದಿಂದ ಇಬ್ಬರಿಗೂ ಲಾಭವಾಗಲಿದೆ ಎಂದು ಮಂಗಳವಾರ (ಎಪ್ರಿಲ್ 8) ಒತ್ತಿ ಹೇಳಿದ್ದ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, ಅಮೆರಿಕ ಸರ್ಕಾರದ ಸುಂಕ ನೀತಿಯಿಂದಾಗಿ ಎದುರಾಗಿರುವ ಸವಾಲುಗಳನ್ನು ಎದುರುಗೊಳ್ಳಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಎಪ್ರಿಲ್ 2, 2025ರಂದು ಎಲ್ಲ ಆಮದುಗಳ ಮೇಲೆ ಶೇ. 10ರ ಮೂಲ ಸುಂಕ ನೀತಿಯನ್ನು ಪ್ರಕಟಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಯ್ದ ದೇಶಗಳ ಆಮದಿನ ಮೇಲೆ ಅಧಿಕ ದರದ ಸುಂಕವನ್ನೂ ವಿಧಿಸಿದ್ದರು.

ಇದರ ಫಲವಾಗಿ, ಚೀನಾವು ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಒಟ್ಟಾರೆ ಶೇ. 54ರಷ್ಟು ಸುಂಕವನ್ನು ಎದುರಿಸುತ್ತಿದ್ದರೆ, ಭಾರತದ ಮೇಲೆ ಶೇ. 26ರಷ್ಟು ಸುಂಕ ಹೇರಲಾಗಿದೆ. ಅಮೆರಿಕದ ವ್ಯಾಪಾರ ಅಸಮತೋಲನ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಸುಂಕ ನೀತಿಯಿಂದಾಗಿ, ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಭಾರತದಲ್ಲೂ ಅಮೆರಿಕದ ರಫ್ತಿನ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಷೇರು ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತದಿಂದಾಗಿ ನಷ್ಟಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಯಾಗಿ, ಎಪ್ರಿಲ್ 10, 2025ರಿಂದ ಅನ್ವಯವಾಗುವಂತೆ ಚೀನಾ ದೇಶವು ಅಮೆರಿಕದ ಸರಕುಗಳ ಆಮದಿನ ಮೇಲೆ ಶೇ. 34ರಷ್ಟು ಸುಂಕ ಹೇರಿಕೆ ಪ್ರಕಟಿಸಿದೆ. ಅಮೆರಿಕದೊಂದಿಗಿನ ವ್ಯಾಪಾರ ಸಂಘರ್ಷ ಉಲ್ಬಣಗೊಳ್ಳುತ್ತಾ ಸಾಗಿರುವುದರಿಂದ, ಅಮೆರಿಕ ವಿರುದ್ಧ ವ್ಯಾಪಾರ ಹೋರಾಟಕ್ಕೆ ಭಾರತದ ಸಹಾಯ ಕೇಳಿದೆ.

ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸ್ತಿದ್ದ ಇಬ್ಬರು ಅರೆಸ್ಟ್ ..! 3 ಮೊಬೈಲ್ ಸೇರಿ 6.99 ಲಕ್ಷ ರೂ. ಜಪ್ತಿ..!

ಡೀಸೆಲ್‌ ಬೆಲೆ ಹೆಚ್ಚಳದಿಂದ ಖಾಸಗಿ ಶಾಲಾ ವಾಹನಗಳ ದರ ಏರಿಕೆಗೆ ನಿರ್ಧಾರ..! ಯಾವಾಗಿನಿಂದ ಜಾರಿಗೆ..?

See also  ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉ.ಕ. ಜಿಲ್ಲೆಯಲ್ಲಿ! ನಾಲ್ವರು ಪಾಕ್‌ ಪ್ರಜೆಗಳು ಗಡಿಪಾರು!
  Ad Widget   Ad Widget   Ad Widget   Ad Widget   Ad Widget   Ad Widget   Ad Widget