Latestಜೀವನ ಶೈಲಿ/ಆರೋಗ್ಯದೇಶ-ವಿದೇಶರಾಜಕೀಯ

ಅಮೆರಿಕದ ಮಾಜಿ ಅಧ್ಯಕ್ಷನಿಗೆ ಮಾರಣಾಂತಿಕ ಕ್ಯಾನ್ಸರ್..! ಬೇಸರ ವ್ಯಕ್ತಪಡಿಸಿದ ಡೋನಾಲ್ಡ್​ ಟ್ರಂಪ್

549

ನ್ಯೂಸ್ ನಾಟೌಟ್: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈ ಕುರಿತು ಭಾನುವಾರ(ಮೇ.18) ಬೈಡನ್ ಕಚೇರಿ ಮಾಹಿತಿ ನೀಡಿದೆ.

ಮೂತ್ರನಾಳದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ತಪಾಸಣೆ ನಡೆಸಿದ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇದೀಗ ಅದು ನಾಲ್ಕನೇ ಹಂತಕ್ಕೆ ತಲುಪಿದ್ದು. ಮೂಳೆಗಳಿಗೂ ಹರಡುವ ಸ್ಥಿತಿಯಲ್ಲಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಚಿಕಿತ್ಸೆಗಳ ಬಗ್ಗೆ ಬೈಡನ್ ಹಾಗೂ ಅವರ ಕುಟುಂಬದವರ ಜೊತೆ ಚರ್ಚಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರಾಸ್ಟೇಟ್ ಕ್ಯಾನ್ಸರ್​ ಲಕ್ಷಣಗಳು ಗಂಭೀರವಾಗಿದ್ದರೂ ಕೂಡ ಅದರ​​ ಹಾರ್ಮೋನ್​ ಸೂಕ್ಷ್ಮವಾಗಿರುವುದರಿಂದ ಪರಿಣಾಮಕಾರಿ ಚಿಕಿತ್ಸೆ ನೀಡಲು ಅವಕಾಶವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರೋಗದ ಗಂಭೀರತೆಯನ್ನು ಪರೀಕ್ಷಿಸಲಾಗುತ್ತದೆ, ಗಂಭೀರ ಸ್ವರೂಪದಲ್ಲಿದೆ ಎಂದು ವೈದ್ಯರು ಹೇಳಿದ್ದಾರೆ.

ಬೈಡನ್ ​ಗೆ ಕ್ಯಾನ್ಸರ್​ ದೃಢಪಟ್ಟ ಸುದ್ದಿ ಅಧಿಕೃತಗೊಳ್ಳುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಹಾಗೂ ​ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಾಮಾಜಿಕ ಜಾಲತಾಣದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಬೈಡನ್​​ ಗೆ ಕ್ಯಾನ್ಸರ್​ ಇರುವ ಸುದ್ದಿ ಕೇಳಿ ಬೇಸರ ಉಂಟಾಯಿತು. ಅವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಹೋರಾಟ ಪ್ರವೃತ್ತಿಯವರಾದ ಬೈಡನ್​ ಅವರು ತಮ್ಮ ಶಕ್ತಿ ಹಾಗೂ ಆಶಾವಾದದ ಮೂಲಕ ಈ ಸವಾಲನ್ನು ಗೆಲ್ಲಲಿದ್ದಾರೆ ಎಂದು ಕಮಲಾ ಹ್ಯಾರಿಸ್ ಪೋಸ್ಟ್ ಮಾಡಿದ್ದಾರೆ.

ಸಾಯುತ್ತೇನೆಂದು 35 ಅಡಿ ಆಳದ ಬಾವಿಗೆ ಹಾರಿದ ಯುವಕ..! ಕಾಪಾಡಿ..ಕಾಪಾಡಿ ಎಂದು ಬೊಬ್ಬೆ ಹಾಕಿದವನನ್ನು ದೇವರಂತೆ ಬಂದು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ, ವಿಡಿಯೋ ವೀಕ್ಷಿಸಿ

 

See also  ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿ ಸದಸ್ಯ..! ಸಿಎಂ ಈ ಬಗ್ಗೆ ನೀಡಿದ ಸ್ಪಷ್ಟನೆ ಏನು..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget