Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ..! ಇರಾನ್ 3 ಅಣುಸ್ಥಾವರಗಳ ಮೇಲೆ ವೈಮಾನಿಕ ಬಾಂಬ್ ದಾಳಿ..!

580

ನ್ಯೂಸ್ ನಾಟೌಟ್ : ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಹಾತಿರುವು ಪಡೆದುಕೊಂಡಿದ್ದು, ಸಂಘರ್ಷಕ್ಕೆ ವಿಶ್ವದ ದೊಡ್ಣ ಅಮೆರಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.
ಇರಾನ್ ರಾಷ್ಟ್ರ 3 ಅಣುಸ್ಥಾವರಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ಅಣುಯುದ್ಧದ (Nuclear War) ಭೀತಿಯನ್ನು ಹೆಚ್ಚಾಗುವಂತೆ ಮಾಡಿದೆ.

ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದೆ. ಎಲ್ಲಾ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ತಾಣಗಳ ಮೇಲೆ ನಾವು ನಮ್ಮ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಂಬ್ ದಾಳಿ ಮಾಡಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ವಾಪಸ್ ನೆಲೆಗಳಿಗೆ ಹೋಗುತ್ತಿವೆ. ನಮ್ಮ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಈ ರೀತಿ ಕಾರ್ಯಾಚರಣೆ ಮಾಡಬಹುದಾದ ಮತ್ತೊಂದು ಸೇನೆಯು ಜಗತ್ತಿನಲ್ಲಿ ಇಲ್ಲ. ಇದು ಶಾಂತಿಯ ಸಮಯ. ಈ ಬೆಳವಣಿಗೆಯ ಬಗ್ಗೆ ನೀವು ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಅಮೆರಿಕಾದ ಈ ದಾಳಿಯು ಜಾಗತಿಕ ರಾಜಕಾರಣದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಇಸ್ರೇಲ್-ಹಮಾಸ್ ಯುದ್ಧ, ಅದರಿಂದ ಶುರುವಾದ ಇಸ್ರೇಲ್-ಇರಾನ್ ಸಂಘರ್ಷ, ಈಗ ಅಮೆರಿಕದ ನೇರ ಪ್ರವೇಶ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವ ಆತಂಕ ಶುರುವಾಗುವಂತೆ ಮಾಡಿದೆ.

 

See also  ಕೇದಾರನಾಥ ದೇಗುಲದ ಬಳಿ ಡಿಜೆ ಹಾಡಿಗೆ ಯುವಕರ ನೃತ್ಯ..! ವಿಡಿಯೋ ವೈರಲ್, ಪ್ರಕರಣ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget