Latestದೇಶ-ವಿದೇಶವೈರಲ್ ನ್ಯೂಸ್

ಅಮೆರಿಕ ಜತೆ ಸಂಬಂಧ ಹಳಸಿದ ಬಳಿಕ ಭಾರತದ ಕಡೆ ಚೀನಾ ಒಲವು..! 4 ತಿಂಗಳಲ್ಲಿ 85 ಸಾವಿರ ಭಾರತೀಯರಿಗೆ ವೀಸಾ ನೀಡಿದ ಚೀನಾ..!

474

ನ್ಯೂಸ್ ನಾಟೌಟ್: ಅಮೆರಿಕದ ಜತೆ ಚೀನಾ ವ್ಯವಹಾರದ ವಿಚಾರವಾಗಿ ಸಂಬಂಧ ಹದಗೆಟ್ಟಿದೆ, ಮುಯ್ಯಿಗೆ ಮುಯ್ಯಿ ಎಂಬಂತೆ ಸುಂಕದ ವಿಚಾರದಲ್ಲಿ ಕಾದಾಡುತ್ತಿವೆ. ಇದೇ ಸಮಯದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ರೂಪಿಸಲು ಚೀನಾ ಮುಂದಾಗಿದೆ. 4 ತಿಂಗಳಲ್ಲಿ ಚೀನಾ 85 ಸಾವಿರ ಭಾರತೀಯರಿಗೆ ವೀಸಾ ನೀಡಿದೆ.

ಆದರೆ ಈಗೇನು ಭಾರತ ಹಾಗೂ ಚೀನಾ ಸಂಬಂಧ ಸರಿ ಇಲ್ಲ, ಮೂರು ವರ್ಷಗಳ ಹಿಂದೆ ಭಾರತದ ಸರ್ಕಾರವು ಹಲವು ಚೀನಾ ಆ್ಯಪ್​ಗಳಿಗೆ ನಿರ್ಬಂಧ ಹೇರಿತ್ತು. ಅದಾದ ಬಳಿಕ ಆದಷ್ಟು ದೇಸೀ ಉತ್ಪನ್ನಗಳನ್ನೇ ಖರೀದಿಸಲು ಸಲಹೆ ನೀಡಲಾಗಿತ್ತು. ಜತೆಗೆ ಗಡಿಯಲ್ಲಿ ಕೂಡ ಉದ್ವಿಗ್ನತೆ ಉಂಟಾಗಿತ್ತು.

ಹೀಗಿರುವಾಗ ಚೀನಾವು ಇಷ್ಟೊಂದು ಮಂದಿ ಭಾರತೀಯರಿಗೆ ವೀಸಾ ಕೊಟ್ಟಿದ್ದು, ಅಚ್ಚರಿ ಮೂಡಿಸಿದೆ, ಅಷ್ಟೇ ಅಲ್ಲದೆ ಕೆಲವು ವೀಸಾ ನಿಯಮಗಳಲ್ಲಿ ಸಡಿಲಿಕೆ ಮತ್ತು ಬದಲಾವಣೆಗಳನ್ನು ಕೂಡ ಮಾಡಿದೆ. ಪೂರ್ವ ಲಡಾಖ್‌ ನಲ್ಲಿ ತಮ್ಮ ಎರಡೂ ಸೇನೆಗಳನ್ನು ಹಿಂಪಡೆದ ನಂತರ ಎರಡೂ ರಾಷ್ಟ್ರಗಳ ನಡುವಿನ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇದಾಗಿದೆ.

ಏಪ್ರಿಲ್ 9, 2025 ರ ಹೊತ್ತಿಗೆ, ಭಾರತದಲ್ಲಿನ ಚೀನೀ ರಾಯಭಾರ ಕಚೇರಿ ಮತ್ತು ದೂತಾವಾಸಗಳು ಈ ವರ್ಷ ಚೀನಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿವೆ. ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು, ಚೀನಾ ಭಾರತೀಯ ಅರ್ಜಿದಾರರಿಗೆ ಹಲವಾರು ವೀಸಾ ನೀತಿ ಸಡಿಲಿಕೆಗಳನ್ನು ಪರಿಚಯಿಸಿದೆ.

ಸಣ್ಣ ಭೇಟಿಗಾಗಿ ಬರುವ ಪ್ರಯಾಣಿಕರಿಗೆ ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವುದರಿಂದ ವಿನಾಯಿತಿ ನೀಡಲಾಗಿದೆ, ಇದು ಅರ್ಜಿ ಸಲ್ಲಿಸುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ವೀಸಾ ಶುಲ್ಕವನ್ನು ಸಹ ಕಡಿಮೆ ಮಾಡಲಾಗಿದ್ದು, ಈ ಪ್ರಕ್ರಿಯೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ.  

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ..! ನಡುಗಿದ ದೆಹಲಿ..!

See also  ವೀಸಾ ಕೇಂದ್ರದ ಟಿವಿಯಲ್ಲಿ ಅಶ್ಲೀಲ ಸಿನಿಮಾ ಪ್ರದರ್ಶನ..! ಮುಂದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget