ಕರಾವಳಿಕಾಸರಗೋಡುಕ್ರೈಂಮಂಗಳೂರುವೈರಲ್ ನ್ಯೂಸ್

ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ..! 3 ರ ದುರಂತ ಅಂತ್ಯ..!

232
pc cr: vartha bharati

ನ್ಯೂಸ್ ನಾಟೌಟ್ : ಕಾಸರಗೋಡು, ಮೇ 7: ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಸಹಿತ ಮೂವರು ಮೃತಪಟ್ಟು, ಉಳಿದ ಮೂವರು ಗಾಯಗೊಂಡ ಘಟನೆ ಇಂದು(ಮೇ.7) ಬೆಳಗ್ಗೆ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ನಡೆದಿದೆ.

ಮೃತಪಟ್ಟವರು ಕಾರಿನಲ್ಲಿದ್ದ ತ್ರಿಶ್ಯೂರು ಇರಿಂಗಾಲಕುಡ ನಿವಾಸಿಗಳಾದ ಶಿವಕುಮಾರ್ (54), ಶರತ್ ಮೆನೋನ್(23) ಮತ್ತು ಸೌರವ್(15) ಎಂದು ಗುರುತಿಸಲಾಗಿದೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ಉಷಾ, ಜೊತೆಗಿದ್ದ ಶಿವದಾಸ್ ಮತ್ತು ಆ್ಯಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಅಪಘಾತದಿಂದ ನಜ್ಜುಗುಜ್ಜಾದ ಕಾರಿನಿಂದ ಮೃಹರಸಾಹಸಪಟ್ಟು ಹೊರತೆಗೆಯಲಾಯಿತು. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಂಗಳೂರು ಕಡೆಯಿಂದ ಕಾಸರಗೋಡಿಗೆ ಬರುತ್ತಿದ್ದ ಕಾರು ನಡುವೆ ಈ ಅಪಘಾತ ಸಂಭವಿಸಿದೆ.

ಸೋಮವಾರ ಚಟ್ಟಂಚಾಲ್ ನಲ್ಲಿ ಸಂಭವಿಸಿದ ವಾಹನ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಉಷಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದವರು ಕೊಲ್ಲೂರು ಕ್ಷೇತ್ರ ದರ್ಶನ ಮುಗಿಸಿ ಮರಳಿ ತ್ರಿಶ್ಯೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.

See also  ವಿಮಾನದೊಳಗೆ ದೈತ್ಯ ಗಾತ್ರದ ಶ್ವಾನವನ್ನು ಕರೆತಂದ ವ್ಯಕ್ತಿ..!‌ ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget