ಕ್ರೈಂದೇಶ-ವಿದೇಶ

ಧಗಧಗ ಹೊತ್ತಿಕೊಂಡ ಗರ್ಭಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ..! ಆಕ್ಸಿಜನ್ ಸಿಲಿಂಡರ್ ಸ್ಫೋಟ, ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ನ ಇಂಜಿನ್ ಗೆ ಬೆಂಕಿ ಹೊತ್ತುಕೊಂಡಿದ್ದು, ನಂತರ ಕೆಲವೇ ನಿಮಿಷದಲ್ಲಿ ಆಕ್ಸಿಜನ್ ಸಿಲಿಂಡರ್‌ ಸ್ಫೋಟಗೊಂಡ ಘಟನೆ ಬುಧವಾರ ಸಂಜೆ ಮಹಾರಾಷ್ಟ್ರದ ಜಲ್ ಗಾಂವ್‌ ನಲ್ಲಿ ನಡೆದಿದೆ. ಗರ್ಭಿಣಿ ಮತ್ತು ಆಕೆಯ ಕುಟುಂಬ ಸದಸ್ಯರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಆಂಬುಲೆನ್ಸ್ ಗೆ ಬೆಂಕಿಹೊತ್ತಿಕೊಂಡ ಕೆಲವೇ ಹೊತ್ತಿನಲ್ಲಿ ಬೆಂಕಿ ಸುತ್ತಲೂ ಆವರಿಸುತ್ತಾ ಬಂದಿದ್ದು, ಬಳಿಕ ಆಂಬುಲೆನ್ಸ್‌ ಒಳಗಿದ್ದ ಆಕ್ಸಿಜನ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಸಮೀಪದಲ್ಲಿದ್ದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿರುವುದು ಸೆರೆಯಾಗಿದೆ. ಆಂಬುಲೆನ್ಸ್ ನ ಇಂಜಿನ್ ನಲ್ಲಿ ಹೊಗೆ ಬರುವುದನ್ನು ಗಮನಿಸಿದ ಚಾಲಕ ಕೂಡಲೇ ಆಂಬುಲೆನ್ಸ್‌ ಅನ್ನು ನಿಲ್ಲಿಸಿ, ಕೆಳಗಿಳಿದು, ಗರ್ಭಿಣಿ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ದೂರ ಕರೆದೊಯ್ದಿದ್ದರು. ನಂತರ ಇಂಜಿನ್ ಗೆ ಹೊತ್ತಿಕೊಂಡ ಬೆಂಕಿ ಎಲ್ಲೆಡೆ ಹಬ್ಬಿ ಆಕ್ಸಿಜನ್ ಸಿಲಿಂಡರ್‌ ಸ್ಫೋಟಗೊಂಡಿರುವುದಾಗಿ ವರದಿ ತಿಳಿಸಿದೆ.

Related posts

ಮೂಗ-ಕಿವುಡ ಮಹಿಳೆಯನ್ನು ಬಾತ್ ರೂಮ್ ನಲ್ಲಿ ಕಟ್ಟಿ ಹಾಕಿ ಯುವಕನಿಂದ ಬಲತ್ಕಾರ..! ಪತ್ನಿಯನ್ನು ಕಂಡು ಕಣ್ಣೀರಿಟ್ಟ ಮೂಗ ಪತಿ..! ಏನಿದು ಕರುಣಾಜನಕ ಕಥೆ

ಕಬಡ್ಡಿ ಆಟವಾಡುತ್ತಿದ್ದಾಗಲೇ ಸಾವನ್ನಪ್ಪಿದ ವಿದ್ಯಾರ್ಥಿನಿ!

ಜಾನುವಾರುಗಳ ಮಾಂಸ, ಚರ್ಮ, ಎಲುಬು ಕೊಠಡಿಯೊಳಗೆ ಪತ್ತೆ..! 11 ಮನೆಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳು..! ಇಲ್ಲಿದೆ ವಿಡಿಯೋ