ದೇಶ-ವಿದೇಶವೈರಲ್ ನ್ಯೂಸ್

ಆ್ಯಂಬುಲೆನ್ಸ್ ನೊಳಗೆ ಮಹಿಳೆಗೆ ಲೈಂಗಿಕ ಕಿರುಕುಳ..! ವಿರೋಧಿಸಿದ್ದಕ್ಕೆ ಪತಿಯ ಜೊತೆಗೆ ಆಕೆಯನ್ನು ವಾಹನದಿಂದ ಹೊರ ತಳ್ಳಿದ ಸಿಬ್ಬಂದಿ..!

212

ನ್ಯೂಸ್ ನಾಟೌಟ್: ಆ್ಯಂಬುಲೆನ್ಸ್ ನಲ್ಲಿ ತನ್ನ ಪತಿಯೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯ ಪತಿಯನ್ನು ಆ್ಯಂಬುಲೆನ್ಸ್ ನಿಂದ ಹೊರಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ.

ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿ ಹರೀಶ್ ರನ್ನು ಸಮೀಪದ ಬಸ್ತಿ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯ ಶುಲ್ಕ ಕಟ್ಟಲು ಸಾಧ್ಯವಿಲ್ಲ ಎಂದು ಮಹಿಳೆ ತನ್ನ ಪತಿಯನ್ನು ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ತೀರ್ಮಾನಿಸಿದ್ದಾರೆ.

ಕರೆದೊಯ್ಯಲು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ನಲ್ಲಿ ಚಾಲಕ ತನ್ನ ಬಳಿ ಕುಳಿತುಕೊಳ್ಳುವಂತೆ ಮಹಿಳೆಗೆ ಬಲವಂತ ಮಾಡಿದ್ದಾನೆ. ಬಳಿಕ ಸಹಾಯಕನ ಜೊತೆ ಸೇರಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆ ವಿರೋಧಿಸಿದ್ದು, ದುಷ್ಕರ್ಮಿಗಳು ಮಹಿಳೆಯ ಅನಾರೋಗ್ಯ ಪೀಡಿತ ಪತಿಯ ಆಕ್ಸಿಜನ್ ಪೂರೈಕೆಯನ್ನು ನಿಲ್ಲಿಸಿ ಇಬ್ಬರನ್ನು ಕೂಡ ಆ್ಯಂಬುಲೆನ್ಸ್ ನಿಂದ ಹೊರಕ್ಕೆ ತಳ್ಳಿದ್ದಾರೆ ಎನ್ನಲಾಗಿದೆ.

ಘಟನೆ ಬಳಿಕ ಸಂತ್ರಸ್ತೆಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಮಹಿಳೆಯ ಪತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2024/09/darshan-thugudeepa-women-protest-infront-of-jail-kannada-news-ballary/
https://newsnotout.com/2024/09/darshan-and-others-party-celebration-before-act-photo-revealed/
https://newsnotout.com/2024/09/airplane-parts-are-droped-to-house-kannada-news-control-room/
https://newsnotout.com/2024/09/tulunadu-culture-are-misused-in-maharatra-kanada-news-kantara-effect/
https://newsnotout.com/2024/09/ksrtc-and-school-bus-collision-rayachur-40-students-in-kannada-news/
https://newsnotout.com/2024/09/pattanagere-shed-bengaluru-renukaswami-photo-leaked-kannada-news/
https://newsnotout.com/2024/09/konkana-railway-job-vacancy-kannada-news-karnataka-190-jobs/
See also  ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಾಡಿದ ತನಿಖೆಗೆ ಪೊಲೀಸರೇ ಶಾಕ್! 8 ವರ್ಷದ ಬಳಿಕ ಕೇಸ್ ರೀಓಪನ್ ಆಗಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget