ಕರಾವಳಿಕ್ರೈಂಸುಳ್ಯ

ಕುಂಬ್ರ: ಓವರ್‌ ಟೇಕ್ ಮಾಡುವ ಭರದಲ್ಲಿ ಆಂಬ್ಯುಲೆನ್ಸ್ ಗೆ ಗುದ್ದಿದ ಕಂಟೈನರ್..! 5 ಮಂದಿಗೆ ಗಾಯ..!

ನ್ಯೂಸ್‌ ನಾಟೌಟ್‌: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಆಂಬ್ಯುಲೆನ್ಸ್ ವೊಂದು ಕಂಟೈನರ್ ಗೆ ಡಿಕ್ಕಿ ಹೊಡೆದ ಘಟನೆ ಸೆ.2 ಸಂಜೆ ನಡೆದಿದೆ.

ಕರಕಂಟೈನ‌ರ್ ಚಾಲಕ ಜೆಸಿಬಿಯೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಘಟನೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿದ್ದ 5 ಮಂದಿ ಗಾಯಗೊಂಡಿದ್ದಾರೆ. ಜಯಪ್ರಕಾಶ್ ಎಂಬವರು ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಆಂಬ್ಯುಲೆನ್ಸ್ ಗೆ ಗುದ್ದಿದೆ.

Related posts

ಪತ್ನಿಯನ್ನು ಹೊಡೆದು ಕೊಂದನೇ ಪತಿರಾಯ?

ಸುಳ್ಯದ ವೈದ್ಯೆಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ರಾಜ್ಯ ಸಮ್ಮೇಳನದಲ್ಲಿ ಗೌರವ ಸ್ವೀಕಾರ

ರಾಜ್ಯದಲ್ಲೇ ದ.ಕ.ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣ, ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದೆ : ಶೌವಾದ್ ಗೂನಡ್ಕ