ಕ್ರೈಂ

ಅಂಬಟೆಡ್ಕ: ಗಾಂಜಾ ಕಳ್ಳರ ಹೆಡೆಮುರಿ ಕಟ್ಟಿದ ಅಬಕಾರಿ ಅಧಿಕಾರಿಗಳು

ಸುಳ್ಯ : ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಸಾಗಾಟ ಮತ್ತು ವ್ಯಸನ ಜಾಸ್ತಿಯಾಗುತ್ತಿದ್ದು ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಳ್ಯ ನಗರದ ಅಂಬಟೆಡ್ಕದ ಬೆನಕ ಹಾಸ್ಟೆಲ್ ನಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಪಲ್ಲತ್ತೂರಿನ ಮೊಯಿದ್ದೀನ್ ಕುಂಞಿ ಎಂಬವರು ಕೊಠಡಿ ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರು. ಇಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಪುತ್ತೂರು ಅಬಕಾರಿ ಇಲಾಖೆಯವರು ಸುಳ್ಯ ಅಬಕಾರಿ ಇಲಾಖೆಯವರೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕೊಠಡಿಯನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ 11.5 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಈ ವೇಳೆ ಮನೆಯೊಳಗಿದ್ದ ಮೊಯಿದ್ದೀನ್ ಕುಂಞಿ ಪರಾರಿಯಾಗಿದ್ದು ಸಲಹುದ್ದೀನ್ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಯಿದ್ದೀನ್ ಕುಂಞಿಯವರ ಕಾರನ್ನು ಕೂಡಾ ವಶಕ್ಕೆ ಪಡೆದಿದ್ದು ಅದರಲ್ಲಿ ಕೂಡಾ 1 ಕೆ.ಜಿ. ಗಾಂಜಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Related posts

ಟಾಯ್ಲೆಟ್‌ ನಿಂದ ಆನ್‌ ಲೈನ್‌ ಮೀಟಿಂಗ್ ಗೆ ಜಾಯಿನ್‌ ಆದ ಮಾಜಿ ಮೇಯರ್..! ಆತನ ಎಡವಟ್ಟಿನಿಂದ ಎಲ್ಲರಿಗೂ ಮುಜುಗರ..! ಇಲ್ಲಿದೆ ವೈರಲ್ ವಿಡಿಯೋ

9 ವರ್ಷಗಳಿಂದ ಕೆಲಸ ಮಾಡದೆ ಈತ ಸರ್ಕಾರಿ ಸಂಬಳ ಪಡೆದದ್ದು ಹೇಗೆ? ಸರ್ಕಾರಿ ಶಾಲಾ ಶಿಕ್ಷಕನ ರಹಸ್ಯ ಬಯಲಾದದ್ದು ಹೇಗೆ?

ಕಾರ್ಕಳ: ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿ! ದುರಂತ ಅಂತ್ಯ ಕಂಡ ದಂಪತಿ! ಅನಾಥರಾದ ಇಬ್ಬರು ಮಕ್ಕಳು!