ಕರಾವಳಿಸುಳ್ಯ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ. ಗುತ್ತಿಗಾರು ವತಿಯಿಂದ ಸಹಾಯ ನಿಧಿ ಕೂಪನ್ ಬಿಡುಗಡೆ

427

ನ್ಯೂಸ್ ನಾಟೌಟ್: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ. ವತಿಯಿಂದ ಸೇವಾ ಯೋಜನೆಗಳ ಸಹಾಯರ್ಥ, ಸಹಾಯ ನಿಧಿ ಕೂಪನ್ ಬಿಡುಗಡೆಗೊಂಡಿತು.

ಪ್ರಸ್ತುತ ಆಸ್ಟ್ರೇಲಿಯಾ ಮೇಲ್ಬೊರ್ನ್ ನಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್ ಕಟ್ಟೆಮನೆ ಮತ್ತು ಲಿಖಿತ ದೀಪಕ್ ಕಟ್ಟೆಮನೆ ದಂಪತಿ ಟ್ರಸ್ಟ್ ಖಾತೆಗೆ ಸಹಾಯಧನ ಹಸ್ತಾಂತರ ಮಾಡುವ ಮೂಲಕ ಬಿಡುಗಡೆಗೊಳಿಸಿ ಶುಭಾಶಯಗಳನ್ನು ತಿಳಿಸಿದರು.

ಸಹಾಯನಿಧಿ ಕೂಪನ್ ನಲ್ಲಿ QRC ಕೋಡ್ scaner ಅಳವಡಿಸಿರುವುದು ವ್ಯವಹಾರದ ಪಾರದರ್ಶಕಕತೆಯ ಬಗ್ಗೆ ತಿಳಿಹೇಳುತ್ತಿದೆ. ಗ್ರಾಮೀಣ ಪ್ರದೇಶದ ಟ್ರಸ್ಟ್ ಈ ಸಾಧನೆ ಮಾಡಿದ್ದು ಉತ್ತಮ ಬೆಳವಣಿಗೆ. 12a&80G ಮಾನ್ಯತೆ ಪಡೆದಿರುವ ಟ್ರಸ್ಟ್ ಸದಾ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದಕ್ಕೆ ಸಂತಸತಂದಿದೆ ಎಂದು ದಂಪತಿ ಶುಭಾಶಯ ವ್ಯಕ್ತಪಡಿದರು.

See also  ಕಾಂತಾರ ಸಿನಿಮಾದ ಆರ್ ಎಕ್ಸ್‌ 100 ಬೈಕ್ ರಹಸ್ಯ ಏನು ಗೊತ್ತಾ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget