ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಅಲ್ಲು ಅರ್ಜುನ್‌ ದುಡ್ಡಿನ ಮದದಿಂದ ಸುಳ್ಳು ಹೇಳ್ತಿದ್ದಾರೆ ಎಂದ ಎಸಿಪಿ..! ಪ್ರಕರಣವನ್ನು ವಜಾಗೊಳಿಸಿಲ್ಲ ಮಧ್ಯಂತರ ಜಾಮೀನು ಸಿಕ್ಕಿದೆ ಅಷ್ಟೇ ಎಂದು ಎಚ್ಚರಿಕೆ ನೀಡಿದ ಪೊಲೀಸ್..!

232

ನ್ಯೂಸ್ ನಾಟೌಟ್: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯ ಬಳಿಕ ಈಗ ಎಸಿಪಿ ಸಬ್ಬತಿ ವಿಷ್ಣು ಪುಷ್ಪ (Pushpa) ಸಿನಿಮಾದ ನಟ ಅಲ್ಲು ಅರ್ಜುನ್‌ (Allu Arjun) ವಿರುದ್ಧ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಪುಷ್ಪ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ಭದ್ರತಾ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಲ್ಲು ಅರ್ಜುನ್‌ ದೂರಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಸಿಪಿ, ಥಿಯೇಟರ್‌ ಗೆ ಹೋಗಲು ಅನುಮತಿ ಇತ್ತು ಅಂತ ಸುಳ್ಳು ಹೇಳುತ್ತಿದ್ದಾರೆ. ಅಲ್ಲು ಅರ್ಜುನ್‌ ಅವರಿಗೆ ಸಂವಿಧಾನಿಕ ಜ್ಞಾನದ ಕೊರತೆಯಿದೆ. ದುಡ್ಡಿನ ಮದದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೋರ್ಟ್ ಅಲ್ಲು ಅರ್ಜುನ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿಲ್ಲ. ಆದರೆ ಈಗ ಮಧ್ಯಂತರ ಜಾಮೀನು ಮಾತ್ರ ನೀಡಿದೆ. ಮಧ್ಯಂತರ ಜಾಮೀನು ನಿಮ್ಮನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ ಎಂದು ಭಾವಿಸಬೇಡಿ ಎಂದು ಹೇಳಿದರು.

ಪುಷ್ಪ ಸಿನಿಮಾದ ಕಥಾವಸ್ತುವನ್ನೇ ಟೀಕಿಸಿದ ಅವರು ವಿಷಕಾರಿ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಬದಲು ಸಮಾಜಕ್ಕೆ ಪ್ರಯೋಜನಕಾರಿ ಸಂದೇಶ ನೀಡುವ ಸಿನಿಮಾಗಳನ್ನು ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪುಷ್ಪಾದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಗೌರವವಾಗಿ ತೋರಿಸಿದ್ದನ್ನು ಖಂಡಿಸಿದ ಅವರು, ಪೊಲೀಸರನ್ನು ಅವಮಾನಿಸಬೇಡಿ ಅಥವಾ ಅವರಿಗೆ ಬೆದರಿಕೆ ಹಾಕಬೇಡಿ. ನಿಜ ಜೀವನದಲ್ಲಿ ಅದೇ ಅಗೌರವವನ್ನು ಪುನರಾವರ್ತಿಸಲು ಬಯಸುತ್ತಿರಾ ಎಂದು ಪ್ರಶ್ನಿಸಿದರು.

Click

https://newsnotout.com/2024/12/theft-kannada-news-80-people-passenger-govt-bus/
https://newsnotout.com/2024/12/takeoff-airplane-airhostelss-viral-news/
https://newsnotout.com/2024/12/kasaragodu-kannada-news-5-shops-are-under-fire-hd/
https://newsnotout.com/2024/12/udupi-kannada-news-tourist-boat-sink-boat-rider-suspence/
https://newsnotout.com/2024/12/viratkohli-restorant-in-bengaluru-cricketer-bbmp-notice/
https://newsnotout.com/2024/12/ticjet-dog-kannada-news-betting-issue-police-arrested-d/
https://newsnotout.com/2024/12/baby-naming-issue-court-case-couple-happy-ending/
https://newsnotout.com/2024/12/kannada-news-police-wood-cutter-kananda-news/
https://newsnotout.com/2024/12/iphone-kannada-news-temple-tamil-nadu-viral-issue-h/
See also  ವಿವಾಹಿತ ಮಹಿಳೆಗಾಗಿ ಸಹೋದರರ ಕಿತ್ತಾಟ..! ಮುಂದೇನಾಯ್ತು..? ಇಲ್ಲಿದೆ ಸಂಪೂರ್ಣ ವಿವರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget