ನ್ಯೂಸ್ ನಾಟೌಟ್:ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೂ ಮುನ್ನ “ಅಲ್ಲಾಹು ಅಕ್ಬರ್” ಎಂದು ಪಠಿಸಿದ್ದ ಜಿಪ್‌ಲೈನ್ ಆಪರೇಟರ್‌ನ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಆತನ ತಂದೆಯೇ ಈ ಬಗ್ಗೆ ಹೇಳಿಕೆ ಕೊಟ್ಟಿದ್ದು, ಅಲ್ಲಾಹು ಅಕ್ಬರ್ ಎಂಬುದು ಯುದ್ಧ ಕರೆಯಲ್ಲ ಎನ್ನುತ್ತಾ ಪುತ್ರನನ್ನು ಸಮರ್ಥಿಸಿಕೊಂಡಿದ್ದಾರೆ.
“ಘಟನೆಯ ವೀಡಿಯೋ ನಾನು ನೋಡಿಲ್ಲ. ಆದರೆ ಅಲ್ಲಾಹು ಅಕ್ಬರ್ ಎಂಬುದು ಯುದ್ಧ ಕರೆಯಲ್ಲ. ಮುಸ್ಲಿಮರಾದ ನಾವು ಚಂಡಮಾರುತದಂತಹ ಸಮಸ್ಯೆ ಎದುರಾದರೂ ಅಲ್ಲಾಹು ಅಕ್ಬರ್ ಎಂದೇ ಹೇಳುತ್ತೇವೆ. ಅಲ್ಲದೇ ಪ್ರವಾಸಿಗರಿಗೆ ಶುಭ ಹಾರೈಸಲು ಅವನು ಈ ರೀತಿ ಪಠಿಸಿರಬಹುದು’ ಎಂದು ಆಪರೇಟರ್ ಮುಜಾಮಿಲ್ ನ ತಂದೆ ಅಬ್ದುಲ್ ಅಜೀಜ್ ಹೇಳಿದ್ದಾರೆ.ಇದೀಗ ಎನ್‌ಐಎ ಅಧಿಕಾರಿಗಳು ಮುಜಾಮಿಲ್ ನನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.