Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಆಲಿಕಲ್ಲು ಮಳೆಯಿಂದ ಹಾರುತ್ತಿದ್ದ ಇಂಡಿಗೋ ವಿಮಾನದ ಮುಂಬಾಗಕ್ಕೆ ಹಾನಿ, 200 ಪ್ರಯಾಣಿಕರು ಬದುಕಿದ್ದೇ ಪವಾಡ..! ಇಲ್ಲಿದೆ ವಿಡಿಯೋ

1.1k

ನ್ಯೂಸ್ ನಾಟೌಟ್: ಆಲಿಕಲ್ಲು ಮಳೆ ಸುರಿಯುತ್ತಿರುವಾಗ 200 ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ದೊಡ್ಡ ಅನಾಹುತದಿಂದ ಪಾರಾಗಿದೆ. ಇದರಿಂದ ವಿಮಾನದ ಮುಂದಿನ ಭಾಗ ಹಾನಿಯಾಗಿದ್ದು ಬಿಟ್ಟರೇ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಇಂಡಿಗೋ ವಿಮಾನ 6E2142 ದೆಹಲಿಯಿಂದ ಜಮ್ಮುಕಾಶೀರದ ಶ್ರೀನಗರಕ್ಕೆ 200 ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿತ್ತು. ವಿಮಾನ ಆಕಾಶದಲ್ಲಿ ಇರುವಾಗಲೇ ಬಲವಾದ ಆಲಿಕಲ್ಲು ಮಳೆ ಆರಂಭವಾಗಿದೆ. ಆಲಿಕಲ್ಲುಗಳು ವಿಮಾನದ ಮೇಲೆ ಬಿದ್ದಿದ್ದರಿಂದ ಶಬ್ಧ ಕೂಡ ಭಯ ಮೂಡಿಸಿದೆ. ಆಲಿಕಲ್ಲು ಮಳೆ ಜೊತೆಗೆ ಗುಡುಗು, ಮಿಂಚು, ಗಾಳಿಯೂ ಜೋರಾಗಿ ಬೀಸುತ್ತಿದ್ದರಿಂದ ಇಡೀ ವಿಮಾನವೇ ಆಕಾಶದಲ್ಲಿ ಅಲುಗಾಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಆಕಾಶದಲ್ಲಿ ವಿಮಾನ ಅಲುಗಾಡುತ್ತಿದ್ದಂತೆ ಒಳಗಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ಪ್ರಯಾಣಿಕರೆಲ್ಲರೂ ಭಯದಿಂದ ಜೋರಾಗಿ ಕಿರುಚಲು, ಕೂಗಲು ಆರಂಭಿಸಿದ್ದಾರೆ. ನಾವು ಬದುಕುವುದಿಲ್ವಾ ಎನ್ನುವ ಮಟ್ಟಿಗೆ ಪ್ರಯಾಣಿಕರು ಭಯ ಪಟ್ಟಿದ್ದಾರೆ. ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನದ ಪೈಲಟ್ ತಕ್ಷಣ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ವರದಿ ಮಾಡಿದ್ದಾರೆ. ತುರ್ತು ವರದಿ ಬೆನ್ನಲ್ಲೇ ಸಂಜೆ 6:30ಕ್ಕೆ ಸುರಕ್ಷಿತವಾಗಿ ವಿಮಾನ ಶ್ರೀನಗರದಲ್ಲಿ ಲ್ಯಾಂಡ್ ಆಗಿದೆ.

ಬಾತ್‌ ರೂಂನಲ್ಲಿ 19 ವರ್ಷದ ಯುವತಿಗೆ ಹೃದಯಾಘಾತ..! ಬಿಪಿ-ಶುಗರ್‌ ನಿಂದ ಬಳಲುತ್ತಿದ್ದ ಯುವತಿ ಸಾವು..!

See also  ಬಾವಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ಕಾಲು ಜಾರಿ ಬಿದ್ದು ಸಾವು..! ಇಲ್ಲಿದೆ ಕರುಣಾಜನಕ ಘಟನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget