ಕರಾವಳಿ

ಪಂಚಾಯತ್ ವಾಹನ ತಡೆದು ಮುತ್ತಿಗೆ ಹಾಕಿದ ಅಜ್ಜಾವರ ದಲಿತ ಕಾಲೊನಿ ಜನ..! ವಿಡಿಯೋ ವೀಕ್ಷಿಸಿ

190

ನ್ಯೂಸ್ ನಾಟೌಟ್ : ಬಿಲ್ ಕಟ್ಟಿಲ್ಲವೆಂದು ಕುಡಿಯುವ ನೀರಿನ ಪಂಪ್ ಶೆಡ್ ಗೆ ಬೀಗ ಹಾಕಿದ ಅಜ್ಜಾವರ ಗ್ರಾಮ ಪಂಚಾಯತ್ ನಡೆಯನ್ನು ಬೊಯಂಬೊ ದಲಿತ ಕಾಲನಿ ಜನ ಕಟು ಪದಗಳಿಂದ ಖಂಡಿಸಿದ್ದಾರೆ. ಇದೀಗ ಪಂಚಾಯತ್ ವಾಹನ ಸ್ಥಳಕ್ಕೆ ಆಗಮಿಸಿದಾಗ ವಾಹನವನ್ನು ತಡೆದಿದ್ದಾರೆ. ಈ ವಿಡಿಯೋ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.

ನಾವು ಬಿಲ್ ಕಟ್ಟಿಲ್ಲವೆಂದ ಮಾತ್ರಕ್ಕೆ ನೀರು ನಿಲ್ಲಿಸುವುದೊಂದೇ ಪರಿಹಾರವೇ..?, ಕೋಟಿ..ಕೋಟಿ ಹಣ ನುಂಗಿದವರಿಗೆ ನೀವು ಮಾಫಿ ಮಾಡುತ್ತೀರಿ, ನಮ್ಮಂತ ಬಡವರು ನೀರಿಗೆ ಬಿಲ್ ಕಟ್ಟಿಲ್ಲವೆಂದು ಪಂಪ್ ಶೆಡ್ ಗೆ ಬೀಗ ಹಾಕುತ್ತೀರಿ. ಯಾವಾಗಲೂ ಬಡವರಿಗೊಂದು ನ್ಯಾಯ ದೊಡ್ಡವರಿಗೊಂದು ನ್ಯಾಯಾ..ಮನೇಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ. ವೃದ್ಧರಿದ್ದಾರೆ. ಅವರ ಪರಿಸ್ಥಿತಿಯನ್ನು ನೋಡಿ ನಮಗೆ ಸ್ವಲ್ಪ ಕಾಲಾವಕಾಶ ನೀಡಬೇಕು. ಏಕಾಏಕಿ ಬೀಗ ಹಾಕಿದರೆ ನಾವು ಕುಡಿಯುವ ನೀರಿಗೆ ಏನು ಮಾಡುವುದು ಎಂದು ಕಾಲೋನಿಯ ಹಿರಿಯ ವ್ಯಕ್ತಿ ಚನಿಯ ತಿಳಿಸಿದ್ದಾರೆ.

See also  ಶ್ರೀ ರಾಜನ್ ದೈವ ಶಿರಾಡಿ ಭೂತದ ಕಾಲಾವಧಿ ಒಂಟಿನೇಮೋತ್ಸವ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget