ಕರಾವಳಿ

ಅಜ್ಜಾವರ: ಗ್ರಾಮ ಪಂಚಾಯತಿ ಸದಸ್ಯೆ ಪತಿ ವಿಷ ಸೇವಿಸಿ ಆತ್ಮಹತ್ಯೆ,ಆಸ್ಪತ್ರೆಗೆ ಕರೆದುಕೊಂಡು ಹೋದರೂ ಫಲಿಸಲಿಲ್ಲ ಚಿಕಿತ್ಸೆ

250

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದ ಅಜ್ಜಾವರದಿಂದ ವರದಿಯಾಗಿದೆ. ಇವರು ಅಜ್ಜಾವರ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಕಲ್ಲಗುಡ್ಡೆಯವರ ಪತಿ ಬಾಬು ನಾಯ್ಕ್ ಎಂದು ತಿಳಿದು ಬಂದಿದೆ.

ಬಾಬು ನಾಯ್ಕ್ ಎಂಬುವವರು ನವೆಂಬರ್ ೨೭ರಂದು ರಾತ್ರಿ ವೇಳೆ ವಿಷ ಸೇವಿಸಿದ್ದರೆಂದು ತಿಳಿದು ಬಂದಿದೆ. ನವೆಂಬರ್ ೨೮ರಂದು ಬೆಳಗ್ಗೆ ದಿಢೀರ್ ಅಸ್ವಸ್ಥಗೊಂಡ ಅವರನ್ನು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು.ಆದರೆ ಚಿಕಿತ್ಸೆ ಫಲಿಸದೇ ಮಧ್ಯಾಹ್ನ ವೇಳೆಗೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಉರುಳಿ ಬಿದ್ದ ಮರ, ವಾಹನ ಸಂಚಾರ ಅಸ್ತವ್ಯಸ್ಥ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget