ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಐಷಾರಾಮಿ ಕಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈನ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ (BEST) ಸಂಸ್ಥೆಯ ಬಸ್ ಜುಹು ಉಪನಗರದಲ್ಲಿ ನಟಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭದಲ್ಲಿ ನಟಿ ಕಾರಿನಲ್ಲಿ ಇರಲಿಲ್ಲ. ಆದ್ರೆ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಅದು ಐಶ್ವರ್ಯ ರೈ ಅವರದ್ದೇ ಕಾರು ಎಂಬುದು ಗೊತ್ತಾಗಿದೆ ಎಂದು ವರದಿಗಳು ತಿಳಿಸಿವೆ.ಅಪಘಾತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕಾರು ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎಂದು ಬೆಸ್ಟ್ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.ಒಂದಿಷ್ಟು ಹೈಡ್ರಾಮಾ ಬಳಿಕ ಬೌನ್ಸರ್ ಪೊಲೀಸರ ಎದುರು ಚಾಲಕನಿಗೆ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
View this post on Instagram