ನ್ಯೂಸ್ ನಾಟೌಟ್: ಇಸ್ರೇಲ್ ಇಬ್ಬರು ಬ್ರಿಟನ್ ಸಂಸದರಿಗೆ ತನ್ನ ದೇಶಕ್ಕೆ ಪ್ರವೇಶಿಸಲು ನಿರಾಕರಿಸಿದ್ದಲ್ಲದೇ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಿದ ಘಟನೆ ನಡೆದಿದೆ.
ಬ್ರಿಟನ್ ನ ಇಬ್ಬರು ಸಂಸದನ್ನು ಇಸ್ರೇಲ್ ಬಂಧಿಸಿ, ಅವರಿಗೆ ಪ್ರವೇಶ ನಿರಾಕರಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಶನಿವಾರ(ಎ.5) ಹೇಳಿದ್ದಾರೆ. ಆಡಳಿತಾರೂಢ ಲೇಬರ್ ಪಾರ್ಟಿಯ ಯುವಾನ್ ಯಾಂಗ್ ಮತ್ತು ಅಬ್ತಿಸಮ್ ಮೊಹಮದ್ ಲಂಡನ್ ನಿಂದ ಇಸ್ರೇಲ್ ಗೆ ತೆರಳಿದಾಗ ಅವರಿಗೆ ದೇಶ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಮತ್ತು ಗಡೀಪಾರು ಮಾಡಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಗೆ ತೆರಳಿದ ಸಂಸದೀಯ ನಿಯೋಗದಲ್ಲಿದ್ದ ಇಬ್ಬರು ಬ್ರಿಟಿಷ್ ಸಂಸದರನ್ನು ಇಸ್ರೇಲಿ ಅಧಿಕಾರಿಗಳು ಬಂಧಿಸಿದ್ದು, ಪ್ರವೇಶ ನಿರಾಕರಿಸಿದ್ದಾರೆ ಎಂಬುದನ್ನು ಒಪ್ಪಲಾಗದು, ಇದು ಪ್ರತಿಕೂಲವಾಗಿದ್ದು, ತೀವ್ರ ಕಳವಳಕಾರಿಯಾಗಿದೆ ಎಂದು ಲ್ಯಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಬ್ರಿಟಿಷ್ ಸಂಸದರನ್ನು ಸರಿಯಾಗಿ ನಡೆಸಿಕೊಳ್ಳುವ ಕ್ರಮವಲ್ಲ ಎಂದು ಇಸ್ರೇಲ್ ಸರ್ಕಾರದ ನನ್ನ ಸಹವರ್ತಿಗಳಿಗೆ ಸ್ಪಷ್ಪಪಡಿಸುತ್ತೇನೆ. ನಮ್ಮ ಬೆಂಬಲ ನೀಡಲು ನಾವು ಇಂದು ರಾತ್ರಿ ಇಬ್ಬರೂ ಸಂಸದರನ್ನು ಸಂಪರ್ಕಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ತೆಗೆದುಕೊಂಡ ಕ್ರಮ ಆಶ್ಚರ್ಯ ಮೂಡಿಸಿದೆ ಎಂದು ಇಬ್ಬರು ಸಂಸದರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಯುದ್ಧದ ಸಮಯದಲ್ಲಿ ಇಸ್ರೇಲ್ ಭದ್ರತಾ ಪಡೆಗಳ ಸೂಕ್ಷ್ಮ ಮಾಹಿತಿಗಳನ್ನು ದಾಖಲಿಸುವುದು ಮತ್ತು ಇಸ್ರೇಲ್ ವಿರುದ್ಧ ದ್ವೇಷದ ಭಾಷಣವನ್ನು ಹರಡುವುದು ಅವರ ಭೇಟಿಯ ಉದ್ದೇಶವಾಗಿತ್ತು ಎಂದು ಹೆಚ್ಚಿನ ವಿಚಾರಣೆಯಿಂದ ತಿಳಿದುಬಂದಿದೆ” ಎಂದು ಆಂತರಿಕ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ನಟಿ ಸಂಜನಾಗೆ 45 ಲಕ್ಷ ರೂ. ವಂಚನೆ..! ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು..!