ರಾಜ್ಯವೈರಲ್ ನ್ಯೂಸ್

Airplane: ಕಲಬುರಗಿ ಮತ್ತು ಬೆಳಗಾವಿ ನಡುವೆ ವಿಮಾನ ಸಂಚಾರ ಆರಂಭ..! ಟಿಕೆಟ್​ ಬೆಲೆ ಎಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ

253

ನ್ಯೂಸ್ ನಾಟೌಟ್: ಕಲ್ಯಾಣ ಕರ್ನಾಟಕದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಇವುಗಳಿಂದ ಸಾಮಾನ್ಯ ಜನರಿಗೆ ಎಷ್ಟು ಪ್ರಯೋಜನವಾಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಕಲಬುರಗಿ ಮತ್ತು ಬೆಳಗಾವಿ ನಡುವೆ ವಾರದಲ್ಲಿ ನಾಲ್ಕು ದಿನ ವಿಮಾನ ಸಂಚಾರ ನಡೆಸಲಿದೆ ಎಂದು ವರದಿ ತಿಳಿಸಿದೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಸುಮಾರು 3 ಗಂಟೆಯಲ್ಲಿ ಜನರು ಸೇಡಂ ರಸ್ತೆಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಪ್ರತಿದಿನ ಬೆಳಗಾವಿ-ಕಲಬುರಗಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಿಮಾನ ಸಂಚಾರ ಘೋಷಿಸಲಾಗಿದ್ದು, ವಾರದಲ್ಲಿ 4 ದಿನ ವಿಮಾನ ಸೇವೆ ಇರಲಿದೆ ಎಂದು ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಘೋಷಣೆ ಮಾಡಿದೆ. ಬೆಳಗಾವಿ-ಕಲಬುರಗಿ ನಡುವಿನ ಪ್ರಯಾಣ ದರ ಪ್ರಾಥಮಿಕವಾಗಿ 6000 ರೂ. ನಿಗದಿ ಮಾಡಲಾಗಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಹಾರಾಟ ನಡೆಸಲಿದೆ. ಈ ಮಾರ್ಗದಲ್ಲಿ ಎಸ್5-153 ಮತ್ತು ಎಸ್5-127 ಮಾದರಿಯ ವಿಮಾನ ಹಾರಾಡಲಿದೆ.

ಬೆಳಗಾವಿಯಿಂದ ಹೊರಡುವ ವಿಮಾನ ತಿರುಪತಿ ಮೂಲಕ ಕಲಬುರಗಿಗೆ ಪ್ರಯಾಣಿಸಲಿದೆ. ಬೆಳಗಾವಿ-ಕಲಬುರಗಿ ನಡುವೆ ಎಸ್5-153 ವಿಮಾನ ಸಂಚಾರ ನಡೆಸಲಿದೆ. ಈ ವಿಮಾನ ಬೆಳಗಾವಿಯಿಂದ ಮಧ್ಯಾಹ್ನ 2.55ಕ್ಕೆ ಹೊರಟು, 4.05ಕ್ಕೆ ತಿರುಪತಿಯಲ್ಲಿ ಲ್ಯಾಂಡ್ ಆಗಲಿದೆ. ತಿರುಪತಿಯಿಂದ 4.30ಕ್ಕೆ ಹೊರಟು, 5.04ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ. ಕಲಬುರಗಿ-ಬೆಳಗಾವಿ ನಡುವೆ ಎಸ್‌5-127 ವಿಮಾನ ಹಾರಾಟ ನಡೆಸಲಿದೆ. ಕಲಬುರಗಿಯಿಂದ ಸಂಜೆ 6.35ಕ್ಕೆ ಹೊರಡುವ ವಿಮಾನ 7.40ಕ್ಕೆ ತಿರುಪತಿಗೆ ತಲುಪಲಿದೆ. ತಿರುಪತಿಯಿಂದ 8.05ಕ್ಕೆ ಹೊರಡುವ ವಿಮಾನ ಬೆಳಗಾವಿಯನ್ನು 8.50ಕ್ಕೆ ತಲುಪಲಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/05/anjali-mother-and-sister-issue
https://newsnotout.com/2024/05/coaching-centre-and-education-centre
See also  ನಟಿ ಆಲಿಯಾ ಭಟ್‌ ಆಶ್ಲೀಲ ವಿಡಿಯೋ ವೈರಲ್, ಈಕೆಗೂ ಕಾಡುತ್ತಿದೆಯಾ ಡೀಫ್ ಫೇಕ್ ಭೀತಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget