ಕ್ರೈಂವೈರಲ್ ನ್ಯೂಸ್

ಹಾರಾಟದ ವೇಳೆ ಆಗಸದಲ್ಲಿ ಅಲುಗಾಡಿದ ವಿಮಾನ, ಕಿರುಚಿದ ಪ್ರಯಾಣಿಕರು..! ಅಷ್ಟಕ್ಕೂ ಅಲ್ಲೇನಾಯ್ತು..?

238

ನ್ಯೂಸ್‌ ನಾಟೌಟ್‌: ಪ್ರತಿಕೂಲ ಹವಾಮಾನದಿಂದಾಗಿ ವಿಮಾನವೊಂದು ಹಾರಾಟದ ವೇಳೆ ನಿರಂತವಾಗಿ ಅಲುಗಾಡಿ ಅಪಾಯದಿಂದ ಪಾರಾದ ಅಘಾತಕಾರಿ ಘಟನೆ ಫೆ.೧೯ ಕ್ಕೆ ನಡೆದಿದೆ.ಸೋಮವಾರ ಹೊಸದಿಲ್ಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ತೆರಳುತ್ತಿತ್ತು.

ಪ್ರತಿಕೂಲ ಹವಾಮಾನದಿಂದಾಗಿ ಭಾರೀ ಅಲುಗಾಡಿದ್ದು ಒಳಗಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಒಂದು ಕ್ಷಣ ಏನಾಯ್ತು ಎಂದು ತೋಚದ ಜನ ಪ್ರಾಣವನ್ನೇ ಕೈಯಲ್ಲಿಡಿದುಕೊಂಡು ಕುಳಿತಿರುವುದು ಒಳಗಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಮಾನದ ಒಳಗಡೆ ಇದ್ದ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.6E6125 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಸಂಜೆ 5.25 ಕ್ಕೆ ಟೇಕಾಫ್ ಆಗಿತ್ತು.

ಈ ವೇಳೆ ಭಾರೀ ಮಳೆಯಿಂದಾಗಿ ತೊಂದರೆಯನ್ನು ಎದುರಿಸಿದೆ. ಆಗ ಏಕಾಏಕಿ ವಿಮಾನ ಅಲುಗಾಡಿದೆ. ಒಂದು ಬಾರಿ ವಿಮಾನ ಅಲುಗಾಡಿದ್ದರೆ ಯಾರಿಗೂ ಹೆಚ್ಚು ಭಯವಾಗುತ್ತಿರಲಿಲ್ಲ. ಆದರೆ ವಿಮಾನ ಅಲುಗಾಡುವುದನ್ನು ಮುಂದುವರೆಸಿದಾಗ ಪ್ರಯಾಣಿಕರು ತಮ್ಮ ಕುರ್ಚಿಗಳನ್ನು ಹಿಡಿದುಕೊಂಡು ಭಯಭೀತರಾಗಿರುವುದು ಕಂಡು ಬಂದಿದೆ.ಈ ವೇಳೆ ಕಾಶ್ಮೀರ ಸೇವಾ ಸಂಘದ ಮುಖ್ಯಸ್ಥ ಬಾಬಾ ಫಿರ್ದೌಸ್ ಕೂಡ ವಿಮಾನದಲ್ಲಿದ್ದರು. ವಿಮಾನ ಅಲುಗಾಡಿಸುವುದನ್ನು ನಿಲ್ಲಿಸಿದಾಗ ಅವರು ತನಗೆ ಮತ್ತು ವಿಮಾನದಲ್ಲಿದ್ದ ಇತರ ಎಲ್ಲ ಪ್ರಯಾಣಿಕರಿಗೆ ಹೊಸ ಜೀವ ಬಂದಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಹಿಮಪಾತ ಶುರುವಾಗಿ ಎರಡನೇ ದಿನ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಅಧಿಕ ಮಳೆ ಮತ್ತು ಭಾರೀ ಹಿಮಪಾತವಾಗುತ್ತಿದೆ. ಹೀಗಾಗಿ 270-ಕಿಮೀ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಮತ್ತು ರಾಂಬನ್ ಜಿಲ್ಲೆಯ ಹೆಚ್ಚು ಸ್ಥಳಗಳಲ್ಲಿ ಗುಡ್ಡಗಳಿಂದ ಕಲ್ಲುಗಳು ಉರುಳಿ ಬಿದ್ದಿವೆ. ಇದರಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ದೋಡಾ ಜಿಲ್ಲೆಯ ಭದೇರ್ವಾಹ್‌ನ ಮೇಲ್ಭಾಗದಲ್ಲಿ ಹಿಮಪಾತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಅಂತರರಾಜ್ಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ದಿಢೀರ್‌ ರಸ್ತೆ ಬಂದ್‌ ಆಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡುವಂತಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ರಸ್ತೆಯನ್ನು ತೆರವುಗೊಳಿಸುವವರೆಗೆ ಮತ್ತು ಹವಾಮಾನ ಸುಧಾರಿಸುವವರೆಗೆ ಹೆದ್ದಾರಿಯಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ.

See also  ಮಡಿಕೇರಿ: 13 ವರ್ಷದ ಬಾಲಕನಿಂದ ಗರ್ಭವತಿಯಾದ ಅಪ್ರಾಪ್ತೆ..! ಮಗುವಿಗೆ ಜನ್ಮ ನೀಡಿದ ಬಳಿಕ ನವಜಾತ ಶಿಶುವನ್ನೇ ನಾಪತ್ತೆ ಮಾಡಿದಳೇ ತಾಯಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget