ನ್ಯೂಸ್ ನಾಟೌಟ್ : ಗುಜರಾತ್ ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗೆಳತಿಯ ಮೃತದೇಹಕ್ಕಾಗಿ ಕಾಯುತ್ತಾ ಆಸ್ಪತ್ರೆ ಒಂದು ಮೂಲೆಯಲ್ಲಿ ಕಣ್ಣೀರು ಇಡುತ್ತಾ ಕುಳಿತುಕೊಂಡಿರೋ ದೃಶ್ಯವೊಂದು ಸೆರೆಯಾಗಿದೆ.
View this post on Instagram
ಆದರೆ ಆ ಯುವಕ ಯಾರು ಎಂಬುವುದರ ಮಾಹಿತಿ ಲಭ್ಯವಿಲ್ಲ. ಯಾರಿಗಾಗಿ ಕಾಯುತ್ತಿದ್ದೀರಿ ಎಂದು ಕೇಳಿದಾಗ ಆ ವ್ಯಕ್ತಿ ಎರಡು ಪದಗಳಲ್ಲಿ ‘ಗೆಳತಿಗಾಗಿ, ನನ್ನ ಪ್ರೀತಿಗಾಗಿ ಅಂತ ಉತ್ತರಿಸಿದ್ದಾನಂತೆ. ಇಷ್ಟಾಗಿ ಅವನೂ ಬೇರೆ ಏನನ್ನೂ ಹೇಳದೇ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದ ಎಂದು ವಿವರಿಸಿದ್ದಾರೆ. ಇದು ಹಲವರಿಗೆ ಕಣ್ಣೀರು ತರಿಸಿದೆ.
ದೇಶದಲ್ಲೇ ಅತಿ ಹೆಚ್ಚು ಆನ್ ಲೈನ್ ಲೈಂಗಿಕ ದೌರ್ಜನ್ಯಕ್ಕೆ ಕರ್ನಾಟಕದ ಮಕ್ಕಳು ಬಲಿ..! ಆತಂಕಕಾರಿ ಮಾಹಿತಿ ಬಹಿರಂಗ..!
ಮಂಗಳೂರು: 12ನೇ ಮಹಡಿಯಿಂದ ಬಿದ್ದು SSLC ವಿದ್ಯಾರ್ಥಿನಿ ಸಾವು..! ಬಟ್ಟೆ ಒಣ ಹಾಕುತ್ತಿದ್ದಾಗ ಘಟನೆ..!