ನ್ಯೂಸ್ ನಾಟೌಟ್: ತನ್ನ ಸಾಕುನಾಯಿಯನ್ನು ವಿಮಾನ ನಿಲ್ದಾಣದ ಶೌಚಾಲಯದ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದ ಮಹಿಳೆಯನ್ನು ಅಮೆರಿಕದ ಒರ್ಲ್ಯಾಂಡೊ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಅಗಾಥಾ ಲಾರೆನ್ಸ್ (57) ಎಂದು ಗುರುತಿಸಲಾಗಿದೆ.
ಸಾಕುನಾಯಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಆಗದಿದ್ದಕ್ಕೆ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 3 ರಂದು ಘಟನೆ ನಡೆದಿತ್ತು ತಡವಾಗಿ ಬೆಳಕಿಗೆ ಬಂದಿದೆ. ಅಂದು ಆರೋಪಿತ ಮಹಿಳೆ ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಕ್ಸಾಸ್ ಗೆ ತೆರಳುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ವೇಳೆ ಅವರು ತಮ್ಮ ಸಾಕುನಾಯಿಯನ್ನು ಜೊತೆಗೆ ತೆಗೆದುಕೊಂಡು ಹೋಗಲು ಆಗಿರಲಿಲ್ಲ. ಅವರ ಬಳಿ ಸೂಕ್ತ ದಾಖಲೆಗಳು ಇರದಿದ್ದರಿಂದ ಭದ್ರತಾ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ಮಹಿಳೆ ನಾಯಿಯನ್ನು ವಿಮಾನ ನಿಲ್ದಾಣದ ವೇಟಿಂಗ್ ರೂಂನ ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದರು.
ಆರಂಭದಲ್ಲಿ ಈ ಪ್ರಕರಣ ಸವಾಲಿನದ್ದಾಗಿತ್ತು. ಸಾಕ್ಷ್ಯಾಧಾರಗಳ್ನು ಸೂಕ್ತವಾಗಿ ಪರಿಶೀಲಿಸಿ ಮಹಿಳೆಗೆ ವಾರಂಟ್ ನೀಡಿ 3 ತಿಂಗಳ ಬಳಿಕ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.