ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಮನೆಗೆ ಬಂದಪ್ಪಳಿಸಿದ ವಿಮಾನ! 14 ವರ್ಷದ ಬಾಲಕ ಸೇರಿ ಇಬ್ಬರು ಗಂಭೀರ!

ನ್ಯೂಸ್ ನಾಟೌಟ್: ಜಾಯ್‌ರೈಡ್ ಗ್ಲೈಡರ್ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಮನೆ ಮೇಲೆ ಅಪ್ಪಳಿಸಿದ ಪರಿಣಾಮ ಪೈಲಟ್ ಹಾಗೂ ವಿಮಾನದಲ್ಲಿದ್ದ ಪ್ರಯಾಣಿಕಗೆ ಗಂಭೀರವಾಗಿ ಗಾಯಗೊಂಡ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ.

ಧನ್‌ಬಾದ್‌ನ ಬರ್ವಡ್ಡಾ ಏರ್‌ಸ್ಟ್ರಿಪ್‌ನಿಂದ ಗ್ಲೈಡರ್ ಹೊರಟು ಸುಮಾರು 500 ಮೀಟರ್ ದೂರದಲ್ಲಿರುವ ಮನೆಗೆ ಢಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ವಿಮಾನದಲ್ಲಿದ್ದ 14 ವರ್ಷದ ಪ್ರಯಾಣಿಕ ಸೇರಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತಕ್ಕೆ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಸತಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೈಲಟ್ ಮತ್ತು ಬಾಲಕನಿದ್ದ ವಿಮಾನವು ವೈಮಾನಿಕ ಪ್ರವಾಸಕ್ಕಾಗಿ ಹೊರಟಿತ್ತು ಎಂದು ತಿಳಿದು ಬಂದಿದೆ.

Related posts

ಮುಸ್ಲಿಂ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ..! 3 ವರ್ಷದ ಮಗನ ಆಸೆ ಈಡೇರಿಸಿ ಭಾವೈಕ್ಯತೆ ಮೆರೆದ ತಂದೆ-ತಾಯಿ

ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಆರೋಗ್ಯದಲ್ಲಿ ಏರುಪೇರು! ಮೆದುಳಿನಲ್ಲಿ ರಕ್ತಸ್ರಾವ!

ಬೆಳ್ತಂಗಡಿ : ತಾನು ವಿಷ ಕುಡಿದು ತನ್ನ ಮಕ್ಕಳಿಗೆ ವಿಷ ಕುಡಿಸಿದ ಕುಡುಕ ತಂದೆ