Latestಕ್ರೈಂವೈರಲ್ ನ್ಯೂಸ್

ಲ್ಯಾಂಡಿಂಗ್ ವೇಳೆ ವಿಮಾನ ಪಲ್ಟಿ..! ಇಲ್ಲಿದೆ ಸಂಪೂರ್ಣ ಮಾಹಿತಿ

425
Spread the love

ನ್ಯೂಸ್ ನಾಟೌಟ್: ಟೊರೊಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಡೆಲ್ಟಾ ಏರ್‌ ಲೈನ್ಸ್ ವಿಮಾನ ಅಪಘಾತಕ್ಕೀಡಾದ ಘಟನೆ ನಡೆದಿದ್ದು, ಕನಿಷ್ಠ 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಹಿಮಭರಿತ ನೆಲದ ಕಾರಣ ವಿಮಾನ ಮಗುಚಿ ಬಿದ್ದಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.

ಆರಂಭಿಕ ವರದಿಯಲ್ಲಿ ಯಾವುದೇ ಸಾವು- ನೋವುಗಳನ್ನು ಖಚಿತಪಡಿಸಿಲ್ಲ. ಗಾಯಗೊಂಡ 18 ಪ್ರಯಾಣಿಕರನ್ನು ಪ್ರದೇಶ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದಿಂದ ತೊಂದರೆಯಾದವರತ್ತ ನಮ್ಮ ಗಮನ ಕೇಂದ್ರೀಕರಿಸಿರುವುದಾಗಿ ಡೆಲ್ಟಾ ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಮಿನ್ನಿಯಾಪೋಲಿಸ್‌ (Minneapolis) ನಿಂದ ಬರುತ್ತಿದ್ದ 80 ಜನರಿದ್ದ ವಿಮಾನ ರನ್‌ವೇಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಂತರ ತುರ್ತು ಕಾರ್ಯಾಚರಣೆ ತಂಡಗಳು ಕಾರ್ಯಾಚರಣೆ ನಡೆಸಿರುವುದಾಗಿ ಟೊರೊಂಟಾ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.

 

See also  ಬೆಕ್ಕು ಕಚ್ಚಿ ಮಹಿಳೆ ಸಾವು..! ಮನೆಯೊಡತಿಗೆ ಯಮನಾದ ಸಾಕುಪ್ರಾಣಿ..!
  Ad Widget   Ad Widget   Ad Widget   Ad Widget