ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಜನವಸತಿ ಪ್ರದೇಶದಲ್ಲಿ ಪತನಗೊಂಡ ವಿಮಾನ, 61 ಮಂದಿ ಸಾವು..! ಇಲ್ಲಿದೆ ವಿಡಿಯೋ

243

ನ್ಯೂಸ್ ನಾಟೌಟ್: ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವೊಂದು ಶುಕ್ರವಾರ(ಆ.9) ಬ್ರೆಜಿಲ್‌ನ (Brazil) ಸಾವೊ ಪಾಲೊ ಬಳಿ ಪತನಗೊಂಡಿದ್ದು ಅದರಲ್ಲಿದ್ದ ಸಿಬ್ಬಂದಿ, ಪ್ರಯಾಣಿಕರು ಸೇರಿ ಎಲ್ಲಾ 61 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಕಸ್ಕಾವೇಲ್ ನಗರದಿಂದ ಸೌವೊ ಪೌಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ Voepass ಏರ್‌ಲೈನ್ಸ್‌ನ ATR-72 ವಿಮಾನ ವಿನೆದೊ ನಗರದ ಜನವಸತಿ ಪ್ರದೇಶದಲ್ಲಿ ಪತನಗೊಂಡಿದೆ.

ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ನೇರವಾಗಿ ಚಲಿಸದೇ ಆಕಾಶದಲ್ಲೇ ಗಿರಕಿ ಹೊಡೆಯುತ್ತಾ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ವೊಪಾಸ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯಿದ್ದರು. ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರ ಸಾವು–ನೋವಾಗಿಲ್ಲ. ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ಪೈಲಟ್‌ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

Click

https://newsnotout.com/2024/08/wayanad-earth-quack-fear-kannada-news-kerala-landslide/
See also  ಅಜ್ಜ-ಅಜ್ಜಿಯನ್ನು ಕೊಂದು ಚಿನ್ನಾಭರಣದೊಂದಿಗೆ ಮಂಗಳೂರಿಗೆ ಬಂದ ಖತರ್ನಾಕ್‌ ಮೊಮ್ಮಗ ಬಂಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget