ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ವಿಮಾನ ಟೇಕ್ ಆಫ್ ಆಗೋ ವೇಳೆ ಬಾಂಬ್ ಬೆದರಿಕೆ..! ಶೌಚಾಲಯದ ಟಿಶ್ಯೂ ಪೇಪರ್‌ ನಲ್ಲಿ ಆತಂಕಕಾರಿ ಬರಹ ಪತ್ತೆ..!

ನ್ಯೂಸ್ ನಾಟೌಟ್: ಏರ್‌ ಇಂಡಿಯಾ ವಿಮಾನ(Air India)ಕ್ಕೂ ಬಾಂಬ್‌ ಬೆದರಿಕೆ ಬಂದಿದ್ದು, ದಿಲ್ಲಿ(Delhi)ಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್‌ ಪತ್ತೆಯಾಗಿದೆ ಎನ್ನಲಾಗಿದೆ.

ಪ್ರಯಾಣಿಕರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದು, ಅಧಿಕೃತ ಮಾಹಿತಿ ಪ್ರಕಾರ ಬೆಳಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್‌ ಆಫ್‌ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿದೆ ಎನ್ನಲಾಗಿದೆ. ಘಟನೆ ವರದಿಯಾಗುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಇಳಿಸಲಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಗೆ ಮಾಹಿತಿ ನೀಡಲಾಗಿದೆ.

CISF ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಪ್ರಯಾಣಿಕರನ್ನು ವಡೋದರಾಕ್ಕೆ ಮತ್ತೊಂದು ವಿಮಾನದಲ್ಲಿ ಕಳುಹಿಸಲಾಗಿದೆ. ವಿಮಾನದಲ್ಲಿ ಇದುವರೆಗೂ ಯಾವುದೇ ಬಾಂಬ್‌ ಅಥವಾ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಇದು ಕೂಡ ಒಂದು ಹುಸಿ ಬಾಂಬ್‌ ಕರೆ ಎನ್ನಲಾಗಿದೆ. ನಿನ್ನೆಯಷ್ಟೇ ದೆಹಲಿ, ಬೆಂಗಳೂರು, ಚೆನ್ನೈ, ಅಹಮದಾಬಾದ್‌ ಶಾಲೆಗಳ ನಂತರ ಇದೀಗ ಕಾನ್ಪುರ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ.

Click 👇

https://newsnotout.com/2024/05/viral-video-and-instagram-live-car-collision
https://newsnotout.com/2024/05/husband-and-wife-gym-trainer-issue
https://newsnotout.com/2024/05/narendra-modi-and-comedian-in-varanasi

Related posts

ಸುಳ್ಯ: ಜ್ಯೋತಿ ಆಸ್ಪತ್ರೆಗೆ ಎರಡನೇ ಬಾರಿಗೆ ರಾಷ್ಟ್ರೀಯ ಮಾನ್ಯತೆ, 47 ವರ್ಷಗಳಿಂದ ನಿರಂತರ ಸೇವೆ

“ಯುಗಾದಿ ಹಬ್ಬದವರೆಗೂ ಸಮಯ ಇದೆ. ಅದಾದ ಬಳಿಕ ಏನಾಗುತ್ತೋ ಕಾದು‌ನೋಡಿ”, ಕೋಡಿಮಠದ ಶ್ರೀಗಳಿಂದ ಮತ್ತೊಂದು ಭಯಾನಕ ಭವಿಷ್ಯ..!

ವಿದ್ಯುತ್ ತಂತಿ ಸ್ಪರ್ಶ, ಆಟೋ ಚಾಲಕ ಸ್ಥಳದಲ್ಲೇ ಮೃತ್ಯು