ಕ್ರೈಂವೈರಲ್ ನ್ಯೂಸ್

ವಿಮಾನ ಮಿಸ್ ಆಯ್ತೆಂದು ರನ್‌ ವೇ ಯಲ್ಲಿ ಓಡಿದ ಈ ಮಹಿಳೆ ಯಾರು? ಆಕೆಯನ್ನು ಬಂಧಿಸಿದ್ದೇಕೆ ಪೊಲೀಸರು?

246

ನ್ಯೂಸ್ ನಾಟೌಟ್ : ಬಸ್‌ ಮಿಸ್ ಆಯ್ತು ಅಂತ ರೈಲು ಮಿಸ್ ಆಯ್ತು ಅಂತ ಅವುಗಳ ಹಿಂದೆ ಜನ ಓಡುವುದನ್ನು ನೀವು ನೋಡಿರಬಹುದು. ಆದರೆ ವಿಮಾನ ಮಿಸ್ ಆಯ್ತು ಎಂದು ರನ್ ವೈಯಲ್ಲಿ ಓಡಿದ್ದಾಳೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ (Australia) ನಡೆದಿದ್ದು, ಈಗ ವೀಡಿಯೋ ಈಗ ವೈರಲ್ ಆಗುತ್ತಿದೆ.

ವಿಮಾನದಲ್ಲಿ ಹೋಗುವುದು ಎಂದಾದರೆ ಕನಿಷ್ಟ ಒಂದು ಗಂಟೆಯಾದರೂ ವಿಮಾನ ನಿಲ್ದಾಣಕ್ಕೆ ಮೊದಲೇ ತಲುಪಿರಬೇಕು. ಆದರೆ ಇಲ್ಲೊಬ್ಬಳು ಮಹಿಳೆ ವಿಮಾನ ಇನ್ನೇನು ಟೇಕಾಫ್ ಆಗಬೇಕು ಅನ್ನುವಷ್ಟರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಬಳಿಕ ವಿಮಾನದ ಕೆಳೆಗೆ ರನ್‌ ವೇಯಲ್ಲಿ ಓಡಿದ್ದಾಳೆ, ಪರಿಣಾಮ ಭದ್ರತಾ ಲೋಪಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ.

ಆಸ್ಟ್ರೇಲಿಯಾದ ಕ್ಯಾನ್‌ಬೆರ್ರಾದಲ್ಲಿ ಮಹಿಳೆಯೊಬ್ಬರು ವಿಮಾನ ನಿಲ್ದಾಣಕ್ಕೆ (Airport) ವಿಳಂಬವಾಗಿ ಬಂದಿದ್ದಾರೆ. ಮಹಿಳೆ ವಿಮಾನ ಇರುವ ಜಾಗ ತಲುಪುವಷ್ಟರಲ್ಲಿ ವಿಮಾನದ ಡೋರ್‌ಗಳು ಬಂದ್ ಆಗಿದ್ದು, ಹಾರಲು ಸಿದ್ಧವಾಗಿವೆ. ಈ ವೇಳೆ ಮಹಿಳೆ ವಿಮಾನ ನಿಂತ ಜಾಗದತ್ತ ಡಾಂಬರು ಹಾಕಿದ ರನ್‌ ವೇಯಲ್ಲಿ ಅಸಹಾಯಕತೆಯಿಂದ ಓಡುವ ದೃಶ್ಯ ವೈರಲ್ ಆಗಿದೆ.

ರನ್‌ವೇಯಲ್ಲಿ ಓಡಿದ ಆಕೆ ಜನ ಬಸ್‌ ನಿಲ್ಲಿಸಲು ಕೈ ತೋರಿಸುವಂತೆ ವಿಮಾನಕ್ಕೆ ಕೈ ತೋರಿಸಿದ್ದಾಳೆ. ಆದರೆ ವಿಮಾನ ಇನ್ನು ಟೇಕಾಫ್‌ ಆಗದಿದ್ದರೂ ಆಕೆಯನ್ನು ವಿಮಾನದೊಳಗೆ ಸೇರಿಸಿಕೊಂಡಿಲ್ಲ. ಈ ವಿಚಾರವೀಗ ಭದ್ರತಾ ಲೋಪದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಕ್ವಾಂಟಾಸ್ಲಿಂಕ್ ಎಂಬ ಈ ವಿಮಾನ ಕ್ಯಾನ್‌ಬೆರ್ರಾದಿಂದ ಆಡಿಲೇಡ್‌ ಗೆ (Adelaide) ಹೊರಟಿತ್ತು. ಆದರೆ ಈಕೆ ವಿಮಾನ ನಿಲ್ದಾಣಕ್ಕೆ ವಿಳಂಬವಾಗಿ ಆಗಮಿಸಿದ ಕಾರಣ ಈ ಘಟನೆ ನಡೆದಿದೆ.

See also  ಉಳ್ಳಾಲ:24 ದನಗಳ ಅಕ್ರಮ ಸಾಗಾಟ;ಗೋವುಗಳ ರಕ್ಷಣೆ,ಓರ್ವ ಸೆರೆ, ಮತ್ತೋರ್ವ ಪರಾರಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget