ದೇಶ-ಪ್ರಪಂಚ

ಸೇತುವೆ ಕೆಳಗೆ ಸಿಕ್ಕಿಬಿದ್ದ ಏರ್ ಇಂಡಿಯಾ ವಿಮಾನ?

ನವದೆಹಲಿ: ಏರ್ ಇಂಡಿಯಾ ವಿಮಾನವೊಂದು ದೆಹಲಿ ವಿಮಾನ ನಿಲ್ದಾಣದ ಸಮೀಪದ ರಸ್ತೆಯೊಂದರ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.  ರನ್ ವೇನಲ್ಲಿ ಚಲಿಸುತ್ತ ನಿಯಂತ್ರಣ ತಪ್ಪಿ ಸೇತುವೆಯ ಕೆಳಗೆ ನುಗ್ಗಿರಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ವಿಮಾನದ ರೆಕ್ಕೆಗಳು ಕಾಣಿಸದಿರುವುದರ ಬಗ್ಗೆ ಅನುಮಾನಗೊಂಡಿದ್ದರು. ಭಾರಿ ವೈರಲ್ ಆಗಿದ್ದ ಈ ವಿಡಿಯೋದ ನೈಜತೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಕೊನೆಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಈ ವಿಮಾನ ನಮ್ಮ ಸಂಸ್ಥೆಯಲ್ಲಿ ಕಾರ್ಯಾಚರಿಸುತ್ತಿಲ್ಲ. ಇದು ಗುಜರಿ ವಿಮಾನ. ಹಿಂದೆಯೇ ಇದನ್ನು ಮಾರಲಾಗಿದೆ ಮತ್ತು ನೋಂದಣಿ ರದ್ದು ಪಡಿಸಲಾಗಿದೆ. ಶನಿವಾರ ರಾತ್ರಿ ಖರೀದಿದಾರರು ಗುಜರಿ ವಿಮಾನವನ್ನು ಸಾಗಿಸುವ ಸಂದರ್ಭ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡಿದೆ. ಈ ಘಟನೆಗೂ ಏರ್ ಇಂಡಿಯಾಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

Related posts

‘ಹರ್ ಹರ್ ಶಂಭು’  ಹಾಡಿದ್ದ ಮುಸ್ಲಿಂ ಗಾಯಕಿಯ ಕಿರಿಯ ಸಹೋದರನ ಬರ್ಬರ ಹತ್ಯೆ,ಭಜನೆ ಹಾಡುವ ವಿವಾದದಲ್ಲಿ ಸಿಲುಕಿದ್ದ ಗಾಯಕಿಗೆ ಇದೆಂಥಾ ಸಂಕಷ್ಟ?

ಪುರಾತನ ದೇವಾಲಯದಲ್ಲಿ 65 ಚಿನ್ನದ ನಾಣ್ಯಗಳು ಪತ್ತೆ!

ಬಣ್ಣ ಬಣ್ಣದ ಸೀರೆಯುಟ್ಟು ಫುಟ್ಬಾಲ್ ಆಡಿದ ಮಹಿಳೆಯರು, ವಿಡಿಯೋ ವೈರಲ್!