Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ವಿಮಾನ ದುರಂತದಲ್ಲಿ ಕ್ಯಾಪ್ಟನ್‌ ಸುಮಿತ್‌ ನ ಕೊನೆ ಕ್ಷಣದ ಆಡಿಯೋ ಲಭ್ಯ..! ಅಷ್ಟಕ್ಕೂ ವಿಮಾನದೊಳಗೆ ನಡೆದದ್ದೇನು..?

1.2k

ನ್ಯೂಸ್ ನಾಟೌಟ್ : ಅಹಮದಾಬಾದ್‌ನಲ್ಲಿ ವಿಮಾನ ದುರಂತದ ಕೊನೆ ಕ್ಷಣಗಳಲ್ಲಿ ಏರ್ ಇಂಡಿಯಾ ಪೈಲಟ್ ಸುಮಿತ್ ಸಭರ್ವಾಲ್ ಎಟಿಸಿಗೆ (ATC) ನೀಡಿದ ಕೊನೆ ಸಂದೇಶದ ಆಡಿಯೋ ಲಭ್ಯವಾಗಿದೆ. ಕೇವಲ 5 ಸೆಕೆಂಡ್‌ಗಳ ಆಡಿಯೋ ಸಿಕ್ಕಿದೆ.

‘ಮೇಡೇ… ಒತ್ತಡವಿಲ್ಲ, ಶಕ್ತಿ ಕಳೆದುಕೊಳ್ಳುತ್ತಿದೆ, ಮೇಲೇರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಭರ್ವಾಲ್ ಅವರು ಎಟಿಸಿಗೆ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ, ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ.

ವಿಮಾನವು 625 ಅಡಿ ಎತ್ತರವನ್ನು ತಲುಪಿದ ಸ್ವಲ್ಪ ಸಮಯದ ನಂತರ ನಿಮಿಷಕ್ಕೆ -475 ಅಡಿ ವೇಗದಲ್ಲಿ ಹಠಾತ್ ಇಳಿಯಲು ಪ್ರಾರಂಭಿಸಿತು. ತಕ್ಷಣವೇ ಪೈಲಟ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ‘ಮೇಡೇ’ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಎಟಿಸಿ ಮಾಡಿದ ಎಲ್ಲಾ ಕರೆಗಳಿಗೆ ಪೈಟಲ್‌ ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಮೇಡೇ ಎಂದರೆ ವಿಮಾನ ತುಂಬಾ ಡೇಂಜರ್‌ನಲ್ಲಿದೆ ಎಂದರ್ಥ. ಜೀವಕ್ಕೆ ಅಪಾಯವಿದೆ ಎಂದು ತುರ್ತು ಪರಿಸ್ಥಿತಿಯನ್ನು ಸೂಚಿಸಲು ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಬಳಸಲಾಗುವ ಅತ್ಯುನ್ನತ ಮಟ್ಟದ ರೇಡಿಯೋ ಸಂಕೇತವಾಗಿದೆ. ಇದು ತಕ್ಷಣದ ಸಹಾಯದ ಅಗತ್ಯವಿದೆ ಎಂದು ಸೂಚಿಸುತ್ತದೆ. ಅವರ ಸಂದೇಶದ ಪ್ರಕಾರ ತಾಂತ್ರಿಕ ದೋಷದಿಂದ ಮಿಮಾನ ನಿರ್ಧಿಷ್ಟ ಎತ್ತರಕ್ಕೆ ಮೇಲೇರಲು ಆಗಿಲ್ಲ, ತಾನಾಗಿಯೇ ನಿಯಂತ್ರಣ ಕಳೆದುಕೊಂಡು ಕೆಳಗೆ ಬಂದಿದೆ ಎನ್ನಲಾಗಿದೆ.

ವಿಮಾನ ದುರಂತದಲ್ಲಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆ‌ ಎದುರು ಪ್ರೇಮಿಯ ಆಕ್ರಂದನ..! ಮನಕಲಕುವ ವಿಡಿಯೋ ವೈರಲ್

See also  ಹೈದರಾಬಾದ್ ನ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಜನಾರ್ದನ ರೆಡ್ಡಿ ಶಿಫ್ಟ್‌..! ವಿಚಾರಣೆ ಮುಂದೂಡಿದ ಕೋರ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget