Latestಕ್ರೈಂದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಏರ್‌ ಇಂಡಿಯಾ ವಿಮಾನ ದುರಂತದ ತನಿಖೆಗೆ 3 ತಿಂಗಳ ಡೆಡ್‌ ಲೈನ್..! ಬ್ಲ್ಯಾಕ್‌ ಬಾಕ್ಸ್‌ ದತ್ತಾಂಶವನ್ನು ಡಿಕೋಡ್‌ ಮಾಡಲಾಗುತ್ತಿದೆ ಎಂದ ಕೇಂದ್ರ ವಿಮಾನಯಾನ ಸಚಿವ

414

ನ್ಯೂಸ್ ನಾಟೌಟ್ : ಜೂನ್‌ 12ರಂದು ಅಹಮದಾಬಾದ್‌ನ ಮೇಘನಿನಗರದಲ್ಲಿ ಸಂಭವಿಸಿದ ವಿಮಾನ ದುರಂತ (Air India Plane Crash) ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ನಿಯೋಜಿಸಲಾಗಿದೆ. ಕೇಂದ್ರ ಗೃಹಸಚಿವಾಲಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, 3 ತಿಂಗಳ ಗಡುವು ನಿಗದಿಪಡಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದರು.

ಏರ್‌ ಇಂಡಿಯಾ ವಿಮಾನ ದುರಂತ ನಡೆದ 48 ಗಂಟೆ ಬಳಿಕ ಮೊದಲ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಚಿವ, ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಗಡುವು ನಿಗದಿಮಾಡಲಾಗಿದೆ ಎಂದು ತಿಳಿಸಿದರು.

ವಿಮಾನ ದುರಂತ ನಡೆದಿದ್ದು ನಿಜಕ್ಕೂ ದುರದೃಷ್ಟಕರ. ನಾನೂ ನನ್ನ ಅಪ್ಪನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ಹಾಗಾಗಿ ಕುಟುಂಬಸ್ಥರ ಕಷ್ಟ ನನಗೆ ಅರ್ಥವಾಗುತ್ತದೆ. ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.

‘ಶುಕ್ರವಾರ ಸಂಜೆ 5 ಗಂಟೆ ವೇಳೆಗೆ ಬ್ಲ್ಯಾಕ್‌ ಬಾಕ್ಸ್‌ (Black Box) ಪತ್ತೆ ಮಾಡಲಾಗಿದ್ದು, ದತ್ತಾಂಶವನ್ನು (Black Box Data) ಡಿಕೋಡ್‌ ಮಾಡಲಾಗುತ್ತಿದೆ. ಇದರ ದತ್ತಾಂಶದಿಂದ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿಯಲಿದೆ. ಅಲ್ಲದೇ ಅನೇಕ ತನಿಖಾ ಸಂಸ್ಥೆಗಳು ಹಾಗೂ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಹ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ವಿವರಿಸಿದರು.
ವಿಮಾನ ದುರಂತವನ್ನು ವಿಮಾನಯಾನ ಸಚಿವಾಲಯವು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ಅಪಘಾತ ನಡೆದ ತಕ್ಷಣ ವಿಮಾನ ಅಪಘಾತ ತನಿಖಾ ಬ್ಯೂರೋ (AAIB)ಗೆ ತನಿಖೆ ನಡೆಸುವಂತೆ ಸೂಚಿಸಲಾಯಿತು. ಕೂಡಲೇ ಎಎಐಬಿ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿತ್ತು ಎಂದು ತಿಳಿಸಿದರು.

ವೈರಲ್ ಆಡಿಯೋ ಬಗ್ಗೆ ಧ್ರುವ ಸರ್ಜಾ ಬಳಿ ಕ್ಷಮೆ ಕೇಳಿದ ಮಡೆನೂರು ಮನು..! ಶಿವಣ್ಣ, ದರ್ಶನ್ ಬಳಿ ಕ್ಷಮೆ ಕೇಳಲು ಸಲಹೆ ನೀಡಿದ ಧ್ರುವ..!

See also  ಮಡಿಕೇರಿ: ಕುಸಿದು ಬಿದ್ದು ಅತ್ತೆ ಸತ್ತರೆಂದು ಕಥೆ ಕಟ್ಟಿದ್ದ ಸೊಸೆ..!ಬಟ್ಟೆಯ ರಕ್ತದ ಕಲೆ, ಮುಖದ ಪರಚಿದ ಕಲೆಗಳು ಗಂಡನಿಗೆ ನೀಡಿತ್ತು ಕೊಲೆಯ ಸುಳಿವು..! ಮುಂದೇನಾಯ್ತು..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget