Latestದೇಶ-ವಿದೇಶ

ಇಂದು(ಜೂ.20) ಕೂಡ ಹಲವು ಏರ್ ಇಂಡಿಯಾ ವಿಮಾನಗಳ ಸಂಚಾರ ರದ್ದು..! ವಿಮಾನಯಾನ ಸಂಸ್ಥೆಗೆ ಸಾಲು-ಸಾಲು ಸವಾಲು..!

285

ನ್ಯೂಸ್ ನಾಟೌಟ್: ನಿರ್ವಹಣೆ, ತಾಂತ್ರಿಕ ದೋಷ, ಕೆಟ್ಟ ಹವಾಮಾನ ಮತ್ತು ವಾಯುಪ್ರದೇಶದ ನಿರ್ಬಂಧಗಳು ಮುಂತಾದ ಕಾರಣಗಳಿಂದ ಇಂದು(ಜೂ.20) ಹಲವು ಏರ್ ಇಂಡಿಯಾ ವಿಮಾನಗಳು ರದ್ದಾಗಿವೆ.

ಜೂನ್ 21 ಮತ್ತು ಜುಲೈ 15 ರ ನಡುವೆ ವಾರಕ್ಕೆ 38 ಅಂತರರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸುವುದಾಗಿ ಮತ್ತು ಮೂರು ವಿದೇಶಿ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಹೇಳಿಕೊಂಡಿದೆ.

ಪ್ರಯಾಣಿಕರು ತಲುಪಬೇಕಾದ ಸ್ಥಳಗಳಿಗೆ ಬೇಗನೆ ತಲುಪುವಂತೆ ಮಾಡಲು ತನ್ನ ತಂಡವು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಪ್ರಯಾಣದ ಟಿಕೆಟ್ ರದ್ದತಿ ಅಥವಾ ಮತ್ತೆ ಟಿಕೆಟ್ ಕಾಯ್ದಿರಿಸುವುದು, ಅಗತ್ಯವಿದ್ದಲ್ಲಿ ಪೂರ್ಣ ಮರುಪಾವತಿ ಅವಕಾಶವನ್ನು ಪ್ರಯಾಣಿಕರಿಗೆ ನೀಡಲಾಗಿದೆ ಎಂದು ವಿಮಾನಾಯನ ಸಂಸ್ಥೆ ತಿಳಿಸಿದೆ.
ದುಬೈನಿಂದ ಚೆನ್ನೈಗೆ AI906, ದಿಲ್ಲಿಯಿಂದ ಮೆಲ್ಬೋರ್ನ್‌ಗೆ AI308, ಮೆಲ್ಬೋರ್ನ್‌ನಿಂದ ದಿಲ್ಲಿಗೆ AI309 ಮತ್ತು ದುಬೈನಿಂದ ಹೈದರಾಬಾದ್‌ ಗೆ AI2204 ಸಂಚರಿಸುವ ಏರ್ ಇಂಡಿಯಾ ವಿಮಾನಗಳು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪುಣೆಯಿಂದ ದಿಲ್ಲಿಗೆ AI874, ಅಹಮದಾಬಾದ್‌ನಿಂದ ದಿಲ್ಲಿಗೆ AI456, ಹೈದರಾಬಾದ್‌ನಿಂದ ಮುಂಬೈಗೆ AI-2872 ಮತ್ತು ಚೆನ್ನೈನಿಂದ ಮುಂಬೈಗೆ AI571 ಈ ನಾಲ್ಕು ದೇಶೀಯ ವಿಮಾನಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.

ಇರಾನ್ ಜೊತೆಗಿನ ಸಂಘರ್ಷದಿಂದ ನನ್ನ ಮಗನ ಮದುವೆ ಮತ್ತೆ ಮುಂದೂಡಬೇಕಾಯ್ತು ಎಂದ ಇಸ್ರೆಲ್ ಪ್ರಧಾನಿ..! ಬೆಂಜಮಿನ್ ನೆತನ್ಯಾಹು ಹೇಳಿಕೆಗೆ ಇಸ್ರೇಲ್ ಪ್ರಜೆಗಳಿಂದಲೇ ವಿರೋಧ..!

₹500 ಲಂಚ ಸ್ವೀಕರಿಸಿದ್ದಕ್ಕೆ ನಿವೃತ್ತಿಯಾದ 10 ವರ್ಷದ ನಂತರ ಗ್ರಾಮಲೆಕ್ಕಾಧಿಕಾರಿ ಜೈಲು ಪಾಲು..! 5 ವರ್ಷದ ಹಿಂದೆಯೇ ಮೃತಪಟ್ಟಿರುವ ದೂರುದಾರ..!

See also  ತೀವ್ರಗೊಂಡ ಯುದ್ಧ: ಇರಾನ್ ನ ಟೆಹರಾನ್‌ ನಲ್ಲಿರುವ ಭಾರತೀಯರು ತಕ್ಷಣ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚನೆ..! 24x7 ತುರ್ತು ಸಹಾಯವಾಣಿ ಆರಂಭಿಸಿದ ಭಾರತ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget