ನ್ಯೂಸ್ ನಾಟೌಟ್: ಅಹಮದಾಬಾದ್ ನ ಮೇಘನಿ ನಗರದಲ್ಲಿ ಪತನವಾದ ಏರ್ ಇಂಡಿಯಾ ಬೋಯಿಂಗ್-787 ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ಡೇಟಾ ರಿಕವರಿಗಾಗಿ ಅಮೆರಿಕಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ವಿಮಾನದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR)ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾದ ಹಿನ್ನೆಲೆ ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಜೂನ್ 13ರಂದು ಬಿಜೆ ಮೆಡಿಕಲ್ ಹಾಸ್ಟೆಲ್ ನ ಮೇಲ್ಛಾವಣಿಯಲ್ಲಿದ್ದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದರೆ ಬ್ಲ್ಯಾಕ್ ಬಾಕ್ಸ್ ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್ ಬಾಕ್ಸ್ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಏರ್ ಇಂಡಿಯಾ ಬೋಯಿಂಗ್-787 ವಿಮಾನದ 2ನೇ ಬ್ಲ್ಯಾಕ್ ಬಾಕ್ಸ್ ಕಳೆದ ಭಾನುವಾರ ಪತ್ತೆಯಾಗಿತ್ತು. ಇದು ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಆಗಿದ್ದು, ವಿಮಾನದಲ್ಲಿ ಪ್ರತಿ ಸೆಕೆಂಡ್ ನಲ್ಲಿ ಏನಾಯ್ತು ಎಂಬುದನ್ನ ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ. ಇದು ಕಾಕ್ ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್ ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ. ಇದನ್ನು ಭಾರತದಲ್ಲೇ ಪರಿಶೀಲಿಸಲಾಗುತ್ತಿದೆ.
ಇರಾನ್ ಪರ ನಿಂತ ಉತ್ತರ ಕೊರಿಯಾ..! ಯುದ್ಧದ ನಡುವೆ ಅಚ್ಚರಿಯ ಬೆಳವಣಿಗೆ..!
ಸಾಲುಮರದ ತಿಮ್ಮಕ್ಕನ ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಸರ್ಕಾರದಿಂದ ನಿವೇಶನ