ಕರಾವಳಿಕ್ರೈಂದೇಶ-ಪ್ರಪಂಚದೇಶ-ವಿದೇಶಮಂಗಳೂರುವೈರಲ್ ನ್ಯೂಸ್

ಮಂಗಳೂರು: ಹಾರುತ್ತಿರುವ ವಿಮಾನದಿಂದ ಸಮುದ್ರಕ್ಕೆ ಜಿಗಿಯುತ್ತೇನೆಂದು ಪ್ರಯಾಣಿಕನ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಏರ್ ಇಂಡಿಯಾ ಸಂಸ್ಥೆ

ನ್ಯೂಸ್ ನಾಟೌಟ್: ವಿದೇಶಗಳಲ್ಲಿ ಹಾರುತ್ತಿರುವ ವಿಮಾನದೊಳಗೆ ಪ್ರಯಾಣಿಕರು ಅನುಚಿತ ವರ್ತನೆಯನ್ನು ಪ್ರದರ್ಶಿಸಿರುವ ವಿಚಾರವನ್ನು ನಾವು ತಿಳಿದುಕೊಂಡಿದ್ದೇವೆ. ಆದರೆ ಇದೀಗ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲೂ ಇಂತಹುದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಏನಿದು ಘಟನೆ..? ಏರ್ ಇಂಡಿಯಾ ವಿಮಾನವು ಪ್ರಯಾಣಿಕರನ್ನು ಹೊತ್ತುಕೊಂಡು ದುಬೈನಿಂದ ಮಂಗಳೂರಿಗೆ ಬರುತ್ತಿತ್ತು. ಈ ವೇಳೆ ವಿಮಾನದೊಳಗೆ ಸಿಬ್ಬಂದಿ ಜೊತೆಗೆ ಪ್ರಯಾಣಿಕ ಅನುಚಿತವಾಗಿ ವರ್ತಿಸಿದ್ದಾನೆ. ನಾನು ವಿಮಾನದಿಂದ ಕೆಳಗೆ ಕಾಣುತ್ತಿರುವ ಸಮುದ್ರಕ್ಕೆ ಹಾರುತ್ತೇನೆ ಎಂದು ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮುಹಮ್ಮದ್ ಬಿ.ಸಿ. (24) ಎಂಬ ಪ್ರಯಾಣಿಕನ ವಿರುದ್ಧ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೆಕ್ಯೂರಿಟಿ ಕೋ- ಆಡಿನೇಟರ್ ಆಗಿರುವ ಸಿದ್ಧಾರ್ಥದಾಸ್ ಬಜಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇ 8ರಂದು ದುಬೈನಿಂದ ಬರುತ್ತಿದ್ದ ಮುಹಮ್ಮದ್ ಅವರು ಸಹ ಪ್ರಯಾಣಿಕರಿಗೆ ವಿನಾಕಾರಣ ತೊಂದರೆ ನೀಡಿದ್ದಾರೆ. ನಿಲ್ದಾಣದ ಸಿಬ್ಬಂದಿ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ ಸ್ಥಗಿತ..! ಮುಖ್ಯ ಪಾತ್ರದಲ್ಲಿ ಖ್ಯಾತ ತಮಿಳು ನಟ ವಿಜಯ ಸೇತುಪತಿ ನಟನೆ

ಪ್ರವಾಹ ಸಂತ್ರಸ್ತರಿಗೊಂದು ಮಹತ್ವದ ಮಾಹಿತಿ

ಜ್ಯೋತಿಷಿಯ ಮಾತು ಕೇಳಿ ಪತ್ನಿ ಮತ್ತು 3 ಮಕ್ಕಳನ್ನು ಗುಂಡಿಕ್ಕಿ ಕೊಂದ ಭೂಪ..! ಮತ್ತೊಂದು ಮದುವೆಯಾಗುವ ವಿಚಾರಕ್ಕೆ ದಂಪತಿ ನಡುವೆ ಕಲಹ..!