ಕರಾವಳಿದೇಶ-ವಿದೇಶವೈರಲ್ ನ್ಯೂಸ್

ಇನ್ನು ಮುಂದೆ ಅಕ್ಕಿ ವಿತರಣೆಗೂ ಬರಲಿದೆ ಎಟಿಎಂ..! ಭಾರತದ ಮೊದಲ ಅಕ್ಕಿ ಎಟಿಎಂ ಯಶಸ್ವಿ

ನ್ಯೂಸ್ ನಾಟೌಟ್: ಎಟಿಎಂನಿಂದ ಹಣ ತೆಗೆಯುವುದನ್ನು ನೀವು ನೋಡಿರುತ್ತೀರಿ, ಇನ್ಮುಂದೆ ಎಟಿಎಂನಿಂದ ಅಕ್ಕಿಯನ್ನೂ ಪಡೆಯಬಹುದು. ಭುವನೇಶ್ವರಿಯಲ್ಲಿ ದೇಶದ ಮೊದಲ ಅಕ್ಕಿ ಎಟಿಎಂಗೆ ಚಾಲನೆ ಬಿಹಾರದಲ್ಲಿ ಚಾಲನೆ ದೊರೆತಿದೆ. ಇದನ್ನು ಪಡಿತರ ಚೀಟಿ ಫಲಾನುಭವಿಗಳಿಗಾಗಿ ಸಿದ್ಧಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಭಾರತದ ಮೊದಲ ಅಕ್ಕಿ ಎಟಿಎಂಗೆ ಒಡಿಶಾ ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಎಂಬವರು ಭುವನೇಶ್ವರದಲ್ಲಿ ಚಾಲನೆ ನೀಡಿದ್ದಾರೆ. ಮಂಚೇಶ್ವರದಲ್ಲಿರುವ ಗೋದಾಮಿನಲ್ಲಿ ಅಳವಡಿಸಲಾಗಿರುವ ಈ ಯಂತ್ರವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಲ್ಲಿ ಅಕ್ಕಿ ವಿತರಣೆಯನ್ನು ಸರಳೀಕರಿಸಲು ವಿನ್ಯಾಸಗೊಳಿಸಲಾಗಿದೆ.

ಅಕ್ಕಿ ಎಟಿಎಂ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್‌ಸ್ಕ್ರೀನ್​ನಲ್ಲಿ ನಮೂದಿಸಿದಾಗ 25ಕೆಜಿವರೆಗೆ ಅಕ್ಕಿಯನ್ನು ವಿತರಿಸಲು ಅನುಮತಿ ಸಿಗಲಿದೆ ನಂತರ ಬಯೋಮೆಟ್ರಿಕ್ ದೃಢೀಕರಣವಿರಲಿದೆ. ಅಕ್ಕಿ ವಿತರಣೆಯ ಈ ಹೊಸ ವ್ಯವಸ್ಥೆಯು ಸಾಂಪ್ರದಾಯಿಕ ವಿತರಣಾ ಕೇಂದ್ರಗಳಲ್ಲಿ ಫಲಾನುಭವಿಗಳು ದೀರ್ಘಕಾಲ ಸರತಿಯಲ್ಲಿ ನಿಂತು ಕಾಯುವ ಅಗತ್ಯವಿರುವುದಿಲ್ಲ.
ಸಬ್ಸಿಡಿ ಅಕ್ಕಿಯ ಕಳ್ಳತನ ಹಾಗೂ ಬ್ಲ್ಯಾಕ್​ ಮಾರ್ಕೆಟ್​ಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶ ಇದಾಗಿದೆ. ಇದು ಭಾರತದಲ್ಲೇ ಮೊದಲ ಅಕ್ಕಿ ಎಟಿಎಂ ಎನ್ನಲಾಗಿದೆ.

Related posts

ರತನ್ ಟಾಟಾ ದೂರದೃಷ್ಟಿಯ ನಾಯಕ ಮಾತ್ರವಲ್ಲ ಓರ್ವ ಪರಿಪೂರ್ಣ ಸಾಧಕ, ನೆಹರು ಮೆಮೋರಿಯಲ್ ಕಾಲೇಜು ಪ್ರಾಂಶುಪಾಲ ಡಾ. ರುದ್ರಕುಮಾರ್.ಎಂ.ಎಂ ಬರೆದ ಅಂಕಣ ಓದಿ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಅವಮಾನಿಸಿದ ಕಿಡಿಗೇಡಿಗಳು

ಕರ್ತವ್ಯ ನಿರತ ವೈದ್ಯರ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ..! ಹೊರ ರೋಗಿ ವಿಭಾಗ ಬಂದ್ ಮಾಡಿ ಜಿಲ್ಲಾಸ್ಪತ್ರೆ ವೈದರು ಮತ್ತು ಸಿಬ್ಬಂದಿಯಿಂದ ಪ್ರತಿಭಟನೆ..! ಇಲ್ಲಿದೆ ವಿಡಿಯೋ