Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

‘ಎಐ ಘಿಬ್ಲಿ’ಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ..! ಗೌಪತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಜ್ಞರು..!

649

ನ್ಯೂಸ್ ನಾಟೌಟ್: ಘಿಬ್ಲಿ ಸ್ಟ್ಯಲ್ (Ghibli Style) ಫೋಟೋಗಳ ಟ್ರೆಂಡ್ ಹೆಚ್ಚಾದ ಬೆನ್ನಲ್ಲೆ ಹಲವು ಎಚ್ಚರಿಕೆಯ ಸಂದೇಶಗಳು ಹರಿದಾಡುತ್ತಿವೆ. ವೈರಲ್ ಆಗುತ್ತಿರುವ ಘಿಬ್ಲಿ ಟ್ರೆಂಡ್ (Ghibli Trend) ಗೌಪತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಜ್ಞರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘AI ಪ್ಲಾಟ್ ಫಾರ್ಮ್ ನಲ್ಲಿ ವೈಯಕ್ತಿಕ ಫೋಟೋ (Personal Photo) ಗಳನ್ನು ಅಪ್ಲೋಡ್ ಮಾಡುವ ಮುನ್ನ ಇದು ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ? ಎಂದು ಒಮ್ಮೆ ತಿಳಿದುಕೊಳ್ಳಿ’ ಎಂದಿದ್ದಾರೆ.

Lusiza Jarovsky ಹೆಸರಿನ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಇದರಲ್ಲಿ, ‘ಬಳಕೆದಾರರು ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿದ ಬಳಿಕ ಆ ಫೋಟೋಗಳ ಬಳಕೆಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಓಪನ್ ಎಐನ ಗೌಪ್ಯತಾ ನೀತಿಯು ಬಳಕೆದಾರರ ಇನ್‌ ಪುಟ್ ಅನ್ನು ಮಾದರಿ ತರಬೇತಿಗಾಗಿ ಬಳಸಬಹುದು, ಇದರಿಂದ ಬಳಕೆದಾರರಿಗೆ ಎದುರಾಗುವ ಅಪಾಯವೇ ಹೆಚ್ಚು ಎಂದು ತಿಳಿಸಿದ್ದಾರೆ.

ಈ ಆಪ್ ಗಳಲ್ಲಿ ಬಳಕೆದಾರರು ಫೋಟೋ ಅಪ್‌ಲೋಡ್ ಮಾಡಿದ ಬಳಿಕ, ಫೋಟೋ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಈ ಫೋಟೋಗಳು ಕಂಪನಿ ಉದ್ದೇಶಗಳಿಗೂ ಬಳಸಬಹುದು. ಮಾನಹಾನಿ ಹಾಗೂ ಕಿರುಕುಳಕ್ಕೆ ಬಳಸಬಹುದಾದ ವಿಷಯವನ್ನು ರಚಿಸಲು ಸಹ ಬಳಸಬಹುದು. ಅದಲ್ಲದೇ, ಬೇರೋಬ್ಬರ ಗುರುತನ್ನು ಕದಿಯುವ ಮೂಲಕ ನೀವು ಅಪ್‌ ಲೋಡ್ ಮಾಡುವ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. 

ಇದನ್ನೂ ಓದಿ6 ತಿಂಗಳ ಕಂದನನ್ನು ಹಿಡಿದು ಅಗ್ನಿ ಕುಂಡ ತುಳಿಯುವಾಗ ಜಾರಿ ಬಿದ್ದ ತಂದೆ..! ವಿಡಿಯೋ ವೈರಲ್

See also  ಕಾರು ಮತ್ತು ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯ ನಡುವೆ ಭೀಕರ ಅಪಘಾತ..! ಕಾಸರಗೋಡಿನ ಒಂದೇ ಕುಟುಂಬದ ಐವರು ಮೃತ್ಯು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget